ಜಗತ್ತಿನ ಎರಡು ಅದ್ಭುತ ಶಕ್ತಿ ಶೀಘ್ರದಲ್ಲೆ ನಾಶ; ವಿಷಗಾಳಿ ಸೇವಿಸಿ ಸಹಸ್ರಾರು ಜನರ ಸಾವಾಗಲಿದೆ: ಕೋಡಿಶ್ರೀ ಭವಿಷ್ಯ

ಸೋಮವಾರ, ಜೂನ್ 17, 2019
31 °C

ಜಗತ್ತಿನ ಎರಡು ಅದ್ಭುತ ಶಕ್ತಿ ಶೀಘ್ರದಲ್ಲೆ ನಾಶ; ವಿಷಗಾಳಿ ಸೇವಿಸಿ ಸಹಸ್ರಾರು ಜನರ ಸಾವಾಗಲಿದೆ: ಕೋಡಿಶ್ರೀ ಭವಿಷ್ಯ

Published:
Updated:
ಜಗತ್ತಿನ ಎರಡು ಅದ್ಭುತ ಶಕ್ತಿ ಶೀಘ್ರದಲ್ಲೆ ನಾಶ; ವಿಷಗಾಳಿ ಸೇವಿಸಿ ಸಹಸ್ರಾರು ಜನರ ಸಾವಾಗಲಿದೆ: ಕೋಡಿಶ್ರೀ ಭವಿಷ್ಯ

ಹಾಸನ: ‘ಜಗತ್ತಿನ ಎರಡು ಅದ್ಭುತ ಶಕ್ತಿಗಳು ಶೀಘ್ರದಲ್ಲೆ ನಾಶ ಆಗ್ತವೆ. ದೇಶದ ಗಡಿಯಲ್ಲಿ ಮದ್ದು–ಗುಂಡುಗಳು ಮೊಳಗುತ್ತವೆ. ಭೀಕರ ಅನಾಹುತ ಸಂಭವಿಸಲಿದ್ದು, ಸಹಸ್ರಾರು ಜನರು ವಿಷಗಾಳಿ ಸೇವಿಸಿ ಸಾಯುತ್ತಾರೆ’ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

‘ಗಡಿಯಲ್ಲಿ– ಮದ್ದು ಗುಂಡುಗಳು ಅಬ್ಬರಿಸುತ್ತವೆ. ಇನ್ನು ಮುಂದೆಯೂ ರಾಜ್ಯದಾದ್ಯಾಂತ ಮಳೆಯಾಗಲಿದೆ’ ಎಂದರು.

‘ಬಿತ್ತಿದಾ ಬೆಳೆಯಾ ಪರರು ಕೊಯ್ದಾರು, ಬಿತ್ತುದಾ ಬೀಜವೊಂದು ಫಸಲು ಇನ್ನೊಂದು ಇದೇ ಆಗೋದು’ ಎಂದು ನುಡಿದರು.

‘ಮುಂದಿನ ಸರ್ಕಾರ ಯಾವುದು ಎಂಬ ಕುರಿತು ಎರಡು ತಿಂಗಳಲ್ಲಿ ಹೇಳುತ್ತೇನೆ. ಈಗ ಸ್ಪಷ್ಟಪಡಿಸಿದರೆ ಒಬ್ಬರಿಗೆ ನೊವು ಮತ್ತೊಬ್ಬರಿಗೆ ನಲಿವು. ಆದ್ದರಿಂದ ನಾನು ಹೇಳುವುದಿಲ್ಲ ಎಂದು ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿಕೆ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry