200ನೇ ಏಕದಿನ ಪಂದ್ಯ ಆಡಿ ದಿಗ್ಗಜರ ದಾಖಲೆ ಮುರಿದ ವಿರಾಟ್‌ ಕೊಹ್ಲಿ

ಶುಕ್ರವಾರ, ಜೂನ್ 21, 2019
22 °C

200ನೇ ಏಕದಿನ ಪಂದ್ಯ ಆಡಿ ದಿಗ್ಗಜರ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Published:
Updated:
200ನೇ ಏಕದಿನ ಪಂದ್ಯ ಆಡಿ ದಿಗ್ಗಜರ ದಾಖಲೆ ಮುರಿದ ವಿರಾಟ್‌ ಕೊಹ್ಲಿ

ಮುಂಬೈ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ನ್ಯೂಜಿಲೆಂಡ್‌ ವಿರುದ್ಧ 200ನೇ ಏಕದಿನ ಪಂದ್ಯ ಆಡುವ ಮೂಲಕ ದಿಗ್ಗಜರ ಹಿಂದಿನ ದಾಖಲೆಗಳನ್ನು ಮುರಿದಿದ್ದಾರೆ.

ಕಡಿಮೆ ಪಂದ್ಯಗಳಲ್ಲಿ ಹೆಚ್ಚು ರನ್‌ ಗಳಿಸಿದ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಜತೆಗೆ, ಸಚಿನ್‌ ತೆಂಡೂಲ್ಕರ್‌, ರಿಕ್ಕಿ ಪಾಂಟಿಂಗ್‌, ಎಬಿ ಡಿವಿಲಿಯರ್ಸ್‌ ಹಾಗೂ ಕ್ರೀಸ್‌ ಗೇಲ್‌ ಸಾಧನೆಯನ್ನು ಮೀರಿ ಆಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

199 ಏಕದಿನ ಪಂದ್ಯಗಲಲ್ಲಿ ಕೊಹ್ಲಿ 55.13ರ ಸರಾಸರಿಯಲ್ಲಿ 8767 ರನ್‌ ಗಳಿಸಿದ್ದು, ಇದರಲ್ಲಿ 30 ಶತಕ ಹಾಗೂ 45 ಅರ್ಧಶತಕಗಳು ಸೇರಿವೆ. ಇತರೆ ಆಟಗಾರರಿಗೆ ಹೋಲಿಸಿದರೆ ಕೊಹ್ಲಿ ರನ್‌ ಗಳಿಕೆ, ಬ್ಯಾಟಿಂಗ್‌ ಸರಾಸರಿ, ಶತಕ ಸಾಧನೆಯಲ್ಲಿಯೂ ಮುಚೂಣಿಯಲ್ಲಿದ್ದಾರೆ.

ಸದ್ಯ ನ್ಯೂಜಿಲೆಂಡ್‌ ವಿರುದ್ಧ 200ನೇ ಏಕದಿನ ಪಂದ್ಯ ಆಡುತ್ತಿರುವ ವಿರಾಟ್‌ ಕೊಹ್ಲಿ ಅರ್ಧ ಶತಕ(74*) ರನ್‌ ಗಳಿಸಿ ಆಟ ಮುಂದುವರಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry