ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಸುಧೆ ಹರಿಸುವ ಸಮ್ಮೇಳನ

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ 1905ರಲ್ಲಿ ಪ್ರಾರಂಭವಾದ ಸಂಸ್ಥೆ ಬೆಂಗಳೂರು ಗಾಯನ ಸಮಾಜ. ಶಾಲೆಯೊಂದರ ಪ್ರಾಂಶುಪಾಲರಾಗಿದ್ದ ರಾಮಚಂದ್ರ ರಾಯರು ಹಾಗೂ ಅವರ ಸಂಗೀತ ಪ್ರೇಮಿ ಸ್ನೇಹಿತರು ಸೇರಿಕೊಂಡು ಸಂಸ್ಥೆಯನ್ನು ಪ್ರಾರಂಭಿಸಿದರು. 112 ವರ್ಷಗಳ ಇತಿಹಾಸವಿರುವ ಗಾಯನ ಸಮಾಜ ದೇಶದಲ್ಲಿಯೇ ಹಿರಿಯ ಸಂಗೀತ ಸಂಸ್ಥೆ ಎಂಬ ಹೆಗ್ಗಳಿಕೆಯನ್ನೂ ಗಳಿಸಿಕೊಂಡಿದೆ.

ಸಂಸ್ಥೆ ಆರಂಭವಾದಾಗಿನಿಂದ ಸಂಗೀತಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಿದೆ. 48 ವರ್ಷಗಳಿಂದ ಸಂಗೀತ ಸಮ್ಮೇಳನವನ್ನು ಪ್ರಾರಂಭಿಸಿ ಸಂಗೀತ ಪ್ರಿಯ ಮನಸ್ಸುಗಳಿಗೆ ಮಾಹಿತಿ ಹಂಚುವ ಕೆಲಸವನ್ನೂ ಸಂಸ್ಥೆ ಮಾಡುತ್ತಿದೆ.

ಸಂಗೀತ ಸಮ್ಮೇಳನದಲ್ಲಿ ಸಂಗೀತದ ವಿವಿಧ ಪ್ರಕಾರಗಳಲ್ಲಿ ಪ್ರೌಢಿಮೆ ಗಳಿಸಿದ ಜನಪ್ರಿಯ ಕಲಾವಿದರನ್ನು ಕರೆಸಿ ಅವರಿಂದ ಗೋಷ್ಠಿ, ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತದೆ.

‘ಸಂಗೀತ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬೆಳವಣಿಗೆ, ಸಂಶೋಧನೆಗಳ ಬಗೆಗೆ ಇಲ್ಲಿ ತಜ್ಞರು ಮಾತನಾಡುತ್ತಾರೆ. ಸಂಗೀತದ ಬಗ್ಗೆ ಅಧ್ಯಯನ ಕೈಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಇದು ಮಾಹಿತಿ ಒದಗಿಸಿಕೊಡುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷರಾದ ಡಾ.ಎಂ.ಆರ್‌.ವಿ.ಪ್ರಸಾದ್‌.

ಈ ವರ್ಷ ಇಲ್ಲಿಯ ಸಭಾಂಗಣವನ್ನು ಜೀರ್ಣೋದ್ಧಾರ ಮಾಡಿ ಸುಸಜ್ಜಿತಗೊಳಿಸಲಾಗಿದ್ದು ಆಧುನೀಕರಿಸಲಾಗಿದೆ. ₹1.7ಕೋಟಿ ಹಣ ಖರ್ಚು ಮಾಡಿ ಎ.ಸಿ, ನೂತನ ಸೌಂಡ್‌ ಸಿಸ್ಟಂ ಮುಂತಾದ ವ್ಯವಸ್ಥೆಯನ್ನು ಮಾಡಿ ಸುಂದರಗೊಳಿಸಲಾಗಿದೆ. ಈ ವರ್ಷದ ಸಂಗೀತ ಸಮ್ಮೇಳನ ಇದೇ ಸಭಾಂಗಣದಲ್ಲಿ ನಡೆಯುತ್ತಿರುವುದು ಇನ್ನೊಂದು ವಿಶೇಷ. ಪ್ರತಿವರ್ಷವೂ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಿ ಅವರಿಗೆ ‘ಸಂಗೀತ ರತ್ನ’ ಎನ್ನುವ ಬಿರುದು ಪ್ರದಾನ ಮಾಡಿ ಐವತ್ತು ಸಾವಿರ ರೂಪಾಯಿಯನ್ನೂ ನೀಡುವುದು ಪರಿಪಾಠವಾಗಿ ನಡೆದುಕೊಂಡು ಬಂದಿದೆ.

ಈ ಬಾರಿ ಸೋಮವಾರದಿಂದ (ಅ.23) ವಿದ್ವತ್‌ ಗೋಷ್ಠಿಗಳು ನಡೆಯಲಿವೆ. ತ್ಯಾಗರಾಜರ 251 ವರ್ಷಾಚರಣೆಯನ್ನೂ ಮಾಡುತ್ತಿರುವುದರಿಂದ ಈ ಬಾರಿಯ ಗೋಷ್ಠಿಗಳಿಗೆ ‘ತ್ಯಾಗರಾಜ ವೈಭವ’ದ ಮೆರುಗು. ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ರುದ್ರಪಟ್ನಂ ಸಹೋದರರಾದ ಆರ್.ಎನ್‌.ತ್ಯಾಗರಾಜನ್‌ ಹಾಗೂ ಆರ್‌.ಎನ್‌.ತಾರಾನಾಥನ್‌ ಪಾತ್ರರಾಗಿದ್ದಾರೆ. ಇವರು ಸೋಮವಾರ ಮಧ್ಯಾಹ್ನ 12.30ಕ್ಕೆ ‘ರೇರ್‌ ಕಂಪೋಸಿಶನ್‌ ಆಫ್‌ ತ್ಯಾಗರಾಜ ಸ್ವಾಮಿ’ ವಿಷಯ ಕುರಿತು ಮಾತನಾಡಲಿದ್ದಾರೆ.

ಅಂದು ಸಂಜೆ 4.15ಕ್ಕೆ ಕಿರಿಯ ಕಲಾವಿದರಿಂದ ಗಾಯನ. ಉತ್ತರಾ ಸ್ವಾಮಿನಾಥನ್‌– ಗಾಯನ. ವೈಭವ್‌ ರಮಣಿ– ಪಿಟೀಲು. ನಿಕ್ಷಿತ್‌ ಪುತ್ತೂರು– ಮೃದಂಗ. ಸಂಜೆ 6ಕ್ಕೆ ಟಿವಿ.ಶಂಕರ ನಾರಾಯಣ– ಗಾಯನ. ಮೈಸೂರು ನಾಗರಾಜ– ಪಿಟೀಲು. ಶ್ರೀಮುಷ್ಣಂ ರಾಜಾರಾವ್‌– ಮೃದಂಗ, ಭಾರದ್ವಾಜ್‌ ಸಾತ್ವಳ್ಳಿ– ಮೋರ್ಚಿಂಗ್‌.

ಮಂಗಳವಾರ ಮಧ್ಯಾಹ್ನ 12.30ಕ್ಕೆ ಮೈಸೂರು ವಿ.ಸುಬ್ರಹ್ಮಣ್ಯ ಅವರು ‘ಪ್ರೊ.ಬಿ.ವಿ.ಕೆ.ಶಾಸ್ತ್ರಿ– ಲೈಫ್‌ ಅಂಡ್‌ ಅಚೀವ್‌ಮೆಂಟ್‌’ ಕುರಿತು ಮಾತನಾಡಲಿದ್ದಾರೆ. ಸಂಜೆ 4.15ಕ್ಕೆ ಸಹನಾ ಚಂದ್ರಶೇಖರ– ಗಾಯನ. ಪ್ರಣವ್‌ ಸ್ವರೂಪ್‌ ಬಿ.ಎನ್‌– ಪಿಟೀಲು. ಕುಮರೇಶ್‌ ಕೃಷ್ಣನ್‌– ಮೃದಂಗ. ಸಂಜೆ 6ಕ್ಕೆ ಡಿ.ಬಾಲಕೃಷ್ಣ– ಗಾಯನ. ವಂಶಿಧರ– ಕೊಳಲು. ಕೆ.ವಿ.ಪ್ರಸಾದ್‌– ಮೃದಂಗ. ನಾರಾಯಣಮೂರ್ತಿ ಎಸ್‌.ಎನ್‌.– ಘಟ.
ಬುಧವಾರ ಮಧ್ಯಾಹ್ನ 12.30ಕ್ಕೆ ‘ವಿವಾದಿ ಮೇಳ ಕೃತೀಸ್‌ ಆಫ್‌ ತ್ಯಾಗರಾಜ ಸ್ವಾಮಿ’ ಕುರಿತು ಆರ್‌.ಎನ್‌.ಶ್ರೀಲತಾ, ‘ತಾಳ, ಲಯ, ಗತಿ, ನಡೆ, ಕಲಾಪ್ರಮಾಣ’ ಕುರಿತು ಆನೂರು ಅನಂತಕೃಷ್ಣ ಶರ್ಮ ಮಾತನಾಡಲಿದ್ದಾರೆ. ಷಡ್ಜ ಗೋಡ್ಖಿಂಡಿ– ಕೊಳಲು. ರೂಪಕ್‌ ಕಲ್ಲೂರ್ಕರ್‌– ತಬಲಾ. ಸಂಜೆ 6ಕ್ಕೆ ಡಾ.ಎಸ್‌.ಸೌಮ್ಯ– ಗಾಯನ. ಚಾರುಲತಾ ರಾಮಾನುಜಂ– ಪಿಟೀಲು. ಸುಧೀಂದ್ರ ಎಚ್‌.ಎಸ್‌–ಮೃದಂಗ. ರಂಗನಾಥ ಚಕ್ರವರ್ತಿ– ಘಟ.

ಗುರುವಾರ 12.30ಕ್ಕೆ ‘ಡಾ.ಎಸ್‌.ರಾಮನಾಥನ್‌–ಲೈಫ್‌ ಅಂಡ್‌ ಅಚೀವ್‌ಮೆಂಟ್ಸ್‌’ ಕುರಿತು ಡಾ.ಎಸ್‌.ಎಸ್‌. ಸೌಮ್ಯ, ‘ಆ್ಯನ್‌ ಅಂಡಸ್ಟೆಂಡಿಂಗ್‌ ಆಫ್‌ ಫ್ಯೂ ರಾಗಾಸ್‌ ಆ್ಯಸ್‌ ಹ್ಯಾಂಡಲ್ಡ್‌ ಇನ್‌ ದ ಪರಂಪರಾಸ್‌ ಆಫ್‌ ಶ್ರೀ ತ್ಯಾಗರಾಜ ಸ್ವಾಮಿ ಅಂಡ್‌ ಶ್ರೀ ಮುತ್ತುಸ್ವಾಮಿ ದೀಕ್ಷಿತರ್‌’ ಕುರಿತು ಆರ್‌.ಕೆ.ಶ್ರೀರಾಮಕುಮಾರ. ಅಕ್ಷತಾ ರುದ್ರಪಟ್ನ– ಗಾಯನ. ಸಿಂಧು ಪುತ್ತೂರಾಯ– ಪಿಟೀಲು. ಚೇತನ್‌ ಮೂರ್ತಿ– ಮೃದಂಗ. ಸಂಜೆ 6ಕ್ಕೆ ಆರ್‌.ಎನ್‌.ತ್ಯಾಗರಾಜನ್‌ ಹಾಗೂ ಆರ್‌.ಎನ್‌.ತಾರಾನಾಥನ್‌– ಗಾಯನ. ಮೈಸೂರು ಮಂಜುನಾಥ– ಪಿಟೀಲು. ಮನ್ನಾರ್‌ಗುಡಿ ಈಶ್ವರನ್‌– ಮೃದಂಗ. ಗುರುಪ್ರಸನ್ನ ಜಿ– ಖಂಜಿರ.

ಶುಕ್ರವಾರ ಮಧ್ಯಾಹ್ನ 12.30ಕ್ಕೆ ‘ಮೃದಂಗ ವಿದ್ವಾನ್‌ ಶ್ರೀ ಗೋಪಾಲ ರಾವ್‌ ಕೆ.ಎಸ್‌.ಲೈಫ್‌ ಅಂಡ್‌ ಅಚೀವ್‌ಮೆಂಟ್‌’ ಕುರಿತು ಬಿ.ಕೆ.ಚಂದ್ರಮೌಳಿ ಹಾಗೂ ‘ಪದ್ಮಭೂಷಣ ಡಾ.ಎಂ.ಬಾಲಮುರಳಿ ಕೃಷ್ಣ ಲೈಫ್‌ ಅಂಡ್‌ ಅಚೀವ್‌ಮೆಂಟ್‌’ ಕುರಿತು ಡಾ.ಪದ್ಮಾ ಸುಗವನಂ ಮಾತನಾಡಲಿದ್ದಾರೆ. ಸುರಭಿ ಗೋಪಾಲ– ವೀಣಾ. ವಿಷ್ಣುವರ್ಧನ ಕೆ– ಮೃದಂಗ. ಸಂಜೆ 6ಕ್ಕೆ ರಾಮಕೃಷ್ಣ ಮೂರ್ತಿ– ಗಾಯನ. ವೆಂಕಟರಮಣ ಎಚ್‌.ಕೆ.– ಪಿಟೀಲು. ಅರ್ಜುನ್‌ ಕುಮಾರ್‌– ಮೃದಂಗ. ಅನಿರುದ್ಧ ಆತ್ರೇಯ– ಖಂಜಿರ.

ಶನಿವಾರ ಮಧ್ಯಾಹ್ನ 12.30ಕ್ಕೆ ಡಾ.ನಾಗಮಣಿ ಶ್ರೀನಾಥ ಅವರಿಂದ ‘ಹರಿದಾಸರು –ತ್ಯಾಗರಾಜರು’ , ಡಾ.ಶತಾವಧಾನಿ ಆರ್‌ ಗಣೇಶ್‌ ಅವರಿಂದ ‘ಸೋಪಗ್ನ ಮ್ಯೂಸಿಕ್‌ ಕೃತೀಸ್‌’ ಉಪನ್ಯಾಸ. ರಂಜನಿ ವಾಸುಕಿ ಗಾಯನದಲ್ಲಿ ಸಹಕರಿಸಲಿದ್ದಾರೆ. ಮಹತಿ ರಘುರಾಂ– ಗಾಯನ. ತರುಣ್‌ ರವಿಶಂಕರ್‌– ಪಿಟೀಲು. ನಾಗೇಂದ್ರ ಪ್ರಸಾದ್‌ ಎಸ್‌.ಪಿ.– ಮೃದಂಗ. ಸಂಜೆ 6ಕ್ಕೆ ಜಯತೀರ್ಥ ಮೇವುಂಡಿ– ಗಾಯನ. ರವೀಂದ್ರ ಕಾಟೋಟಿ– ಹಾರ್ಮೋನಿಯಂ. ಕೇಶವ ಜೋಶಿ– ತಬಲಾ.

ಭಾನುವಾರ ಬೆಳಿಗ್ಗೆ 10ಕ್ಕೆ ಸಮಾರೋಪ ಸಮಾರಂಭ. ಎಸ್‌.ಎಂ.ಕೃಷ್ಣ, ಎನ್‌.ಆರ್‌. ವಿಷ್ಣುಕುಮಾರ್‌, ಡಾ.ಎಂ. ಮೋಹನ ಆಳ್ವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರುದ್ರಪಟ್ನಂ ಸಹೋದರರಿಗೆ ಸಂಗೀತ ಕಲಾರತ್ನ ಬಿರುದು ಪ್ರದಾನ. ಎಂ.ಜಿ. ವೆಂಕಟರಾಘವನ್‌ (ಗಾಯನ), ಬಿ. ರಘುರಾಂ (ಪಿಟೀಲು), ಎನ್‌.ಜಿ. ರವಿ (ಮೃದಂಗ), ಕೆ. ವರದರಂಗನ್‌ (ಮ್ಯೂಸಿಕೊಲೊಜಿಸ್ಟ್‌), ಗಂಗಮ್ಮ ಕೇಶವಮೂರ್ತಿ (ಗಮಕ) ಅವರಿಗೆ ಶ್ರೀಕಲಾ ಜ್ಯೋತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಕಾರ್ಯಕ್ರಮ ಕೆ.ಆರ್‌.ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT