ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆ ಉಡಲೊಂದು ಸವಾಲು

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಫ್ಯಾಷನ್‌ ಜಗತ್ತಿಗೆ ಒಗ್ಗಿಕೊಂಡು ಬದಲಾವಣೆಯನ್ನು ಅಪ್ಪಿಕೊಳ್ಳುತ್ತಿದೆ ಸೀರೆ. ಇದರ ಫಲವಾಗಿ ಎಲ್ಲಾ ಕಾಲಕ್ಕೂ ಸಲ್ಲುವ ಉಡುಗೆ ಎನ್ನುವ ಮನ್ನಣೆ ಸೀರೆಗೆ ದಕ್ಕಿದೆ. ಸೀರೆಗೆ ಮೆರುಗು ನೀಡುವುದು ರವಿಕೆ. ಆದರೆ ರವಿಕೆಯಿಲ್ಲದೆ ಸೀರೆ ಉಡುವುದು ಕೂಡ ಈಗ ಫ್ಯಾಷನ್‌. ರವಿಕೆ ಇಲ್ಲದೇ ಸೀರೆ ಉಟ್ಟು ಮೆರೆದ ಸೆಲೆಬ್ರಿಟಿಗಳ ಸಂಖ್ಯೆಯೂ ದೊಡ್ಡದು. ಹೀಗೆ ಸೀರೆ ಉಡುವುದು ಒಂದು ರೀತಿಯ ಕೌಶಲ. ಈ ಜಾಣ್ಮೆಯನ್ನು ಪರೀಕ್ಷೆಗೆ ಒಡ್ಡಿದ್ದು ‘ನೋ ಬ್ಲೌಸ್ ಚಾಲೆಂಜ್’.

'ರವಿಕೆ ಇಲ್ಲದೇ ಸೀರೆ ಉಡೋದಾ? ಅದ್ಹೇಗೆ ಸಾಧ್ಯ?' ಎಂದು ಹುಬ್ಬೇರಿಸಬೇಡಿ.

ಈ ಚಾಲೆಂಜ್ ಸ್ವೀಕರಿಸಿ ಹಲವು ಮಹಿಳೆಯರು ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ ತಮ್ಮ ಸಾಧನೆಯನ್ನು ಅಚ್ಚುಕಟ್ಟಾಗಿ ಫೋಟೊ ತೆಗೆದು ಇನ್‌ಸ್ಟಾಗ್ರಾಮ್‌ನಲ್ಲಿ ದಾಖಲಿಸಿದ್ದಾರೆ. #ಸಾರಿಫೆಸ್ಟಿವಲ್‌ #ನೋಬ್ಲೌಸ್‌# ಜೈಸಾರಿ ಹ್ಯಾಷ್‌ಟ್ಯಾಗ್‌ನಿಂದ ಪೋಸ್ಟ್ ಮಾಡಲಾಗಿದ್ದ ಈ ಚಾಲೆಂಜ್‌ಗೆ ದೇಶದ ವಿವಿಧೆಡೆಗಳಿಂದ ಮಹಿಳೆಯರು ಉತ್ಸಾಹದಿಂದ ಸ್ಪಂದಿಸಿದ್ದರು.

ರವಿಕೆಯ ಹಂಗಿಲ್ಲದೆ ಭಿನ್ನವಾಗಿ ಸೀರೆಯನ್ನು ಹೇಗೆ ಉಡಬಹುದು ಎಂಬುದನ್ನು ಹಲವು ಮಹಿಳೆಯರು ತೋರಿಸಿದ್ದಾರೆ. ಕೆಲವರು ಸೀರೆ ಉಟ್ಟ ಬಗೆಯಂತೂ ವಸ್ತ್ರವಿನ್ಯಾಸಕರಿಗೆ ಸೆಡ್ಡು ಹೊಡೆಯುವಂತಿತ್ತು.

‘ರವಿಕೆ ಇಲ್ಲದೇ ಸೀರೆ ಧರಿಸುವುದು ಸಂಪ್ರದಾಯ. ಹಿಂದೆಯೂ ಈ ಪದ್ಧತಿ ಇತ್ತು. ಹಿಂಜರಿಕೆ ಬಿಡಿ. ನೀವೂ ರವಿಕೆ ಇಲ್ಲದೇ ಸೀರೆ ಧರಿಸಿದ ಫೋಟೊವನ್ನು ಪೋಸ್ಟ್ ಮಾಡಿ. ಭಿನ್ನವಾಗಿ ಸೀರೆ ಧರಿಸುವ ಮೂಲಕ ನಿಮ್ಮ ಸೃಜನಶೀಲತೆಯನ್ನು ಹೊರಹಾಕಿ’ ಎಂದು ಸಾಕಷ್ಟು ಮಂದಿ ಕರೆ ನೀಡಿದ್ದಾರೆ.

ಉತ್ತರ ಕರ್ನಾಟಕದ ಹಾಲಕ್ಕಿ ಸಮುದಾಯದವರಂತೆ ಸೀರೆ ಉಟ್ಟ ಮಹಿಳೆಯೊಬ್ಬರು ‘ನಾನು ಕರ್ನಾಟಕದಲ್ಲಿ ಖ್ಯಾತಿ ಹೊಂದಿರುವ ಇಳಕಲ್‌ ಸೀರೆಯಲ್ಲಿ ಹಾಲಕ್ಕಿ ಸಮುದಾಯದವರಂತೆ ಸೀರೆ ಧರಿಸಿದ್ದೇನೆ. ಬ್ಲೌಸ್ ಮತ್ತು ಲಂಗ ವಿದೇಶಗಳಿಂದ ಎರವಲು ಪಡೆದ ಸಂಪ್ರದಾಯ. ನಮ್ಮ ಮೂಲ ಸಂಸ್ಕೃತಿಯಂತೆ ಸೀರೆ ಉಡುವುದು ನನಗೆ ಖುಷಿ ಕೊಡುವ ಸಂಗತಿ' ಎಂದು ಖುಷಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT