7
ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಆರೋಪ

‘ನನ್ನ ಹತ್ಯೆಗೆ ಷರೀಫ್‌ ಸಹೋದರರ ಯತ್ನ’

Published:
Updated:
‘ನನ್ನ ಹತ್ಯೆಗೆ ಷರೀಫ್‌ ಸಹೋದರರ ಯತ್ನ’

ಲಾಹೋರ್‌: ‘ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಅವರ ಸಹೋದರ ಶಹ್‌ಬಾಜ್‌ ಷರೀಫ್‌ ಅವರು ನನ್ನನ್ನು ಎರಡು ಬಾರಿ ಹತ್ಯೆ ಮಾಡಲು ಯತ್ನಿಸಿದ್ದರು’ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಆಸಿಫ್‌ ಅಲಿ ಜರ್ದಾರಿ ಆರೋಪಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತಾವು ಎಂಟು ವರ್ಷ ಜೈಲಿನಲ್ಲಿದ್ದಾಗ ಈ ಹತ್ಯೆಯ ಸಂಚು ನಡೆದಿತ್ತು ಎಂದು ಲಾಹೋರ್‌ನ ಬಿಲವಾಲ್‌ ಭವನದಲ್ಲಿ ಶನಿವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಹೇಳಿದ್ದಾರೆ.

ಪ್ರಕರಣಗಳ ವಿಚಾರಣೆ ಎದುರಿಸಲು ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಈ ಸಂಚನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿದ್ದರು ಎಂದು ಜರ್ದಾರಿ ತಿಳಿಸಿದ್ದಾರೆ.

ಇದರ ಜೊತೆಗೆ, ನನ್ನ ಬೆಂಬಲ ಪಡೆಯಲು ನವಾಜ್‌ ನನ್ನನ್ನು ಸಂಪರ್ಕಿಸುತ್ತಲೇ ಇದ್ದಾರೆ ಎಂದೂ ತಿಳಿಸಿದ್ದಾರೆ.

‘ನನ್ನ ಹಾಗೂ ನನ್ನ ಪತ್ನಿ ಬೆನಜೀರ್‌ ಭುಟ್ಟೊಗೆ ಷರೀಫ್‌ ಸಹೋದರರು ಮಾಡಿದ ಮೋಸವನ್ನು ನಾನಿನ್ನೂ ಮರೆತಿಲ್ಲ. ಮೆಮೊಗೇಟ್‌ ವಿವಾದದಲ್ಲಿ ನನ್ನನ್ನು ತಪ್ಪಿತಸ್ಥನಾಗಿಸಲು ಷರೀಫ್‌ ನ್ಯಾಯಾಲಯಕ್ಕೆ ಹೋಗಿದ್ದರು. ಅವರಿಗೆ ಸಮಸ್ಯೆ ಎದುರಾದಾಗ ಮಾತ್ರ ಅವರು ನಮ್ಮೊಂದಿಗೆ ಕೈಜೋಡಿಸಲು ಮುಂದೆ ಬರುತ್ತಾರೆ. ಆದರೆ, ಅಧಿಕಾರದಲ್ಲಿದ್ದಾಗ ನಿಮ್ಮನ್ನು ಚಾಣಾಕ್ಷ ರೀತಿಯಲ್ಲಿ ಹಿಂದೆ ಸರಿಸುತ್ತಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry