ರಾಮ್‌ ಮುಖರ್ಜಿ ನಿಧನ

ಶುಕ್ರವಾರ, ಮೇ 24, 2019
22 °C

ರಾಮ್‌ ಮುಖರ್ಜಿ ನಿಧನ

Published:
Updated:

ಮುಂಬೈ: ಬಾಲಿವುಡ್‌ ನಟಿ ರಾಣಿ ಮುಖರ್ಜಿ ಅವರ ತಂದೆ, ಚಲನ ಚಿತ್ರ ನಿರ್ಮಾಪಕ ರಾಮ್‌ ಮುಖರ್ಜಿ(84) ದೀರ್ಘ ಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾದರು.

ರಕ್ತದೊತ್ತಡ ಕಡಿಮೆಯಾದದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಅವರು ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ರಾಮ್‌ ಮುಖರ್ಜಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ರಾಮ್‌ ಮುಖರ್ಜಿ ಅವರು ಹಮ್‌ ಹಿಂದೂಸ್ತಾನಿ, ಲೀಡರ್‌, ಹಾಗೂ 1996ರಲ್ಲಿ ರಾಣಿ ಮುಖರ್ಜಿಯ ಚೊಚ್ಚಲ ಚಿತ್ರ  ಬಿಯರ್‌ ಫೋಲ್‌ ಅನ್ನು  ನಿರ್ಮಾಣ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry