ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ಷೇರುಪೇಟೆ ವಹಿವಾಟು: ಇನ್ಫಿ, ಐಟಿಸಿ ಫಲಿತಾಂಶದ ಪ್ರಭಾವ ನಿರೀಕ್ಷೆ

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಕಂಪೆನಿಗಳ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಭಾವ ಬೀರಲಿದೆ ಎಂದು ಮಾರುಕಟ್ಟೆ ಪರಿಣತರು ಹೇಳಿದ್ದಾರೆ.

ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ–ಸೆಪ್ಟೆಂಬರ್ ಅವಧಿ) ಇನ್ಫೊಸಿಸ್, ಐಟಿಸಿ, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಕೋಟಕ್ ಮಹೀಂದ್ರಾ ಬ್ಯಾಂಕ್‌, ಐಡಿಎಫ್‌ಸಿ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್‌ ಆರ್ಥಿಕ ಸಾಧನೆ ಈ ವಾರವೇ ಪ್ರಕಟವಾಗಲಿದೆ. ಆರ್ಥಿಕ ಸಾಧನೆ ಆಧಾರದ ಮೇಲೆ ಕಂಪೆನಿ ಷೇರುಗಳ ಮೌಲ್ಯದಲ್ಲಿ ಏರಿಳಿತ ಆಗಲಿದ್ದು, ಷೇರುಪೇಟೆ ವಹಿವಾಟಿನ ಮೇಲೆಯೂ ಪರಿಣಾಮ ಬೀರಲಿದೆ.

ಜಿಎಸ್‌ಟಿ, ಕಂಪೆನಿಗಳ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎನ್ನುವುದು ಸಹ ಈ ಆರ್ಥಿಕ ಸಾಧನೆಯಿಂದ ತಿಳಿಯಲಿದೆ. ಈ ದೃಷ್ಟಿಯಿಂದಲೂ ತ್ರೈಮಾಸಿಕ ಫಲಿತಾಂಶ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಬ್ಯಾಂಕ್‌ಗಳ ಆರ್ಥಿಕ ಸಾಧನೆಯು ಷೇರುಪೇಟೆಗಳ ಮೇಲೆ ಹೆಚ್ಚುಪ್ರಭಾವ ಬೀರಲಿದೆ ಎಂದು ಮಾರುಕಟ್ಟೆಯ ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಂಕ್‌ಗಳ ವಸೂಲಿಯಾಗದ ಸಾಲ (ಎನ್‌ಪಿಎ) ಗರಿಷ್ಠ ಮಟ್ಟದಲ್ಲಿದೆ. ಹೀಗಾಗಿ ಈ ತ್ರೈಮಾಸಿಕದಲ್ಲಿ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಸುಧಾರಿಸಿದೆಯೇ ಅಥವಾ ಇನ್ನಷ್ಟು ಹದಗೆಡಲಿದೆಯೇ ಎನ್ನುವುದು ತಿಳಿಯಲಿದೆ.

ವಾಯಿದಾ ವಹಿವಾಟು: ಅಕ್ಟೋಬರ್ ತಿಂಗಳ ಸರ್ಕಾರಿ ಬಾಂಡ್‌ಗಳ ವಾಯಿದಾ ವಹಿವಾಟು ಗುರುವಾರ ಅಂತ್ಯವಾಗಲಿದೆ. ಇದು ಸಹ ಸೂಚ್ಯಂಕದ ಚಲನೆಯ ಮೇಲೆ ಪ್ರಭಾವ ಬೀರಲಿದೆ.  ದೀಪಾವಳಿಯ ಆರಂಭದ ದಿನವೇ ಸೂಚ್ಯಂಕಗಳು ಇಳಿಕೆ ಕಂಡಿವೆ. ಮುಹೂರ್ತದ ವಹಿವಾಟಿನಲ್ಲಿ ಬಿಎಸ್‌ಇ ಸೂಚ್ಯಂಕ 194 ಅಂಶ ಇಳಿಕೆ ಕಂಡು 32,389 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT