ಇಟಿಎಫ್‌ ಹೂಡಿಕೆ ಪಿಎಫ್‌ ಖಾತೆಗೆ?

ಮಂಗಳವಾರ, ಜೂನ್ 25, 2019
26 °C
ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಸಭೆಯಲ್ಲಿ ಪರಿಗಣನೆ

ಇಟಿಎಫ್‌ ಹೂಡಿಕೆ ಪಿಎಫ್‌ ಖಾತೆಗೆ?

Published:
Updated:
ಇಟಿಎಫ್‌ ಹೂಡಿಕೆ ಪಿಎಫ್‌ ಖಾತೆಗೆ?

ನವದೆಹಲಿ: ಷೇರುಪೇಟೆಯ ಹೂಡಿಕೆ ನಿಧಿಗಳಲ್ಲಿ (ಇಟಿಎಫ್‌) ತೊಡಗಿಸಿದ ಮೊತ್ತದಲ್ಲಿನ ಚಂದಾದಾರರ ಪಾಲನ್ನು ಅವರ ಭವಿಷ್ಯ ನಿಧಿ ಖಾತೆಗೆ ವರ್ಗಾಯಿಸುವ ಪ್ರಸ್ತಾವದ ಕುರಿತು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಮುಂದಿನ ತಿಂಗಳು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

‘ಇಪಿಎಫ್‌ಒ’ದ ನಿರ್ಧಾರ ಕೈಗೊಳ್ಳುವ ಉನ್ನತ ಸಮಿತಿಯಾಗಿರುವ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು (ಸಿಬಿಟಿ) ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ನೇತೃತ್ವದಲ್ಲಿ ನವೆಂಬರ್‌ನಲ್ಲಿ ಸಭೆ ಸೇರಲಿದೆ. ಇಟಿಎಫ್‌ ಹೂಡಿಕೆಯನ್ನು ಪಿಎಫ್‌ ಚಂದಾದಾರರ ಖಾತೆಗೆ ಸೇರಿಸುವ ಪ್ರಸ್ತಾವವನ್ನು ಸಭೆ ಪರಿಗಣಿಸಲಿದೆ. ಭವಿಷ್ಯ ನಿಧಿಯಲ್ಲಿನ ಹಣ ಮರಳಿ ಪಡೆಯುವಾಗ ಈ ಮೊತ್ತವೂ ಅದರಲ್ಲಿ ಸೇರ್ಪಡೆಗೊಂಡಿರುತ್ತದೆ. ಈ ಪ್ರಸ್ತಾವಕ್ಕೆ ಮಹಾಲೇಖಪಾಲರು (ಸಿಎಜಿ) ತಾತ್ವಿಕ ಸಮ್ಮತಿ ನೀಡಿದ್ದಾರೆ. ಕೆಲ ಸ್ಪಷ್ಟನೆಗಳನ್ನೂ ಕೇಳಿದ್ದಾರೆ ಎಂದು ಕಾರ್ಮಿಕ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಈ ಪ್ರಸ್ತಾವಕ್ಕೆ ಸಮ್ಮತಿ ದೊರೆತರೆ ಇಟಿಎಫ್‌ನಲ್ಲಿನ ಚಂದಾದಾರರ ಪಾಲನ್ನು (ಇಟಿಎಫ್‌ ಯುನಿಟ್) ಠೇವಣಿದಾರರ ಖಾತೆಗೆ ಸೇರಿಸಲಾಗುವುದು. ‘ಇಟಿಎಫ್‌’, ಷೇರುಪೇಟೆಯಲ್ಲಿನ ಹೂಡಿಕೆ ನಿಧಿಯಾಗಿದ್ದು, ಪೇಟೆಯಲ್ಲಿನ ಇತರ ಷೇರುಗಳಂತೆ ವಹಿವಾಟು ನಡೆಸುತ್ತದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ‘ಇಪಿಎಫ್‌ಒ’ದ ಇಟಿಎಫ್‌ ಹೂಡಿಕೆಯು ₹ 45 ಸಾವಿರ ಕೋಟಿಗಳಿಗೆ ತಲುಪುವ ನಿರೀಕ್ಷೆ ಇದೆ.

‘ಇಪಿಎಫ್‌ಒ’ದಲ್ಲಿನ ಹೂಡಿಕೆ ಮಾಡಬಹುದಾದ ಠೇವಣಿಯನ್ನು ಇಟಿಎಫ್‌ಗಳಲ್ಲಿ ತೊಡಗಿಸುವುದು 2015ರ ಆಗಸ್ಟ್‌ನಿಂದ ಜಾರಿಗೆ ಬಂದಿದೆ. ಆರಂಭದಲ್ಲಿ ಇದು ಶೇ 5ರಷ್ಟಿತ್ತು. ಸದ್ಯಕ್ಕೆ ಶೇ 15ಕ್ಕೆ ತಲುಪಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry