7

‘ರಾಹುಲ್ ದುರ್ಬಲ ಎನ್ನುವ ಬಿಜೆಪಿ ತಂತ್ರ ಇನ್ನು ನಡೆಯದು’

Published:
Updated:
‘ರಾಹುಲ್ ದುರ್ಬಲ ಎನ್ನುವ ಬಿಜೆಪಿ ತಂತ್ರ ಇನ್ನು ನಡೆಯದು’

ನವದೆಹಲಿ:‘ರಾಹುಲ್ ಗಾಂಧಿ ಅವರನ್ನು ದುರ್ಬಲ ವ್ಯಕ್ತಿಯಂತೆ ಚಿತ್ರಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಆದರೆ ಇನ್ನು ಮುಂದೆ ಬಿಜೆಪಿಯ ಆ ತಂತ್ರ ನಡೆಯುವುದಿಲ್ಲ. ರಾಹುಲ್ ಗಾಂಧಿ ಬಿಜೆಪಿಗೆ ತಕ್ಕ ವಿರೋಧಿ ನಾಯಕ ಎಂಬ ಅಭಿಪ್ರಾಯ ರೂಪುಗೊಳ್ಳುತ್ತಿದೆ’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

‘ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ತಾವು ನೀಡಿದ್ದ ಭರವಸೆಗಳನ್ನು ಯಾವಾಗ ಈಡೇರಿಸುತ್ತಾರೆ ಎಂದು ಜನ ಕೇಳಲು ಆರಂಭಿಸಿದ್ದಾರೆ. ಬಿಜೆಪಿ ನಡೆಸುತ್ತಿರುವ ಯಾತ್ರೆಗಳೆಲ್ಲಾ ವಿಫಲವಾಗುತ್ತಿವೆ. ಪಂಜಾಬ್‌ನ ಗುರುದಾಸಪುರ ಲೋಕಸಭಾ ಕ್ಷೇತ್ರ ಮತ್ತು ಕೇರಳದ ವೆಂಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಇದು ಸಾಬೀತಾಗಿದೆ’ ಎಂದು ತರೂರ್ ಹೇಳಿದ್ದಾರೆ.

‘2014ರ ಏಪ್ರಿಲ್‌–ಮೇನಲ್ಲಿ ಜನರಿಗೆ ನಮ್ಮ ಮೇಲಿದ್ದ ವಿಶ್ವಾಸಕ್ಕಿಂತ ಈಗ ಹೆಚ್ಚು ವಿಶ್ವಾಸವಿದೆ. ಕಾಂಗ್ರೆಸ್‌ ಅನ್ನು ಜನರು ಬಿಜೆಪಿಗೆ ಪರ್ಯಾಯ ಎಂದು ಭಾವಿಸುತ್ತಿದ್ದಾರೆ. ರಾಹುಲ್ ಪಕ್ಷದ ಅಧ್ಯಕ್ಷರಾದರೆ ಪಕ್ಷದಲ್ಲಿ ಹೊಸ ಸಂಚಲನ ಮೂಡಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry