ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಹುದ್ದೆ: ಹೆಣ್ಣಿನ ಪ್ರಮಾಣ ಶೇ 26 ಮಾತ್ರ

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿಗಳಲ್ಲಿನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಮಹಿಳೆಯರ ಒಟ್ಟು ಪ್ರಮಾಣ ಶೇ 34ರಷ್ಟು ಎಂದು ಬಿಲಾಂಗ್‌ ಸಂಸ್ಥೆ ನಡೆಸಿದ ಸಮೀಕ್ಷೆ ಹೇಳಿದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸ ಮಾಡುವ ಮಹಿಳೆಯರ ಪ್ರಮಾಣ ಇನ್ನೂ ಕಡಿಮೆ ಇದೆ. ಇದು ಶೇ 26ರಷ್ಟು ಎಂದು ಸಂಸ್ಥೆ ಹೇಳಿದೆ.

‘ಭಾರತದಲ್ಲಿನ ತಂತ್ರಜ್ಞಾನ ಸಂಬಂಧಿ ಕ್ಷೇತ್ರದಲ್ಲಿ ಲಿಂಗ ಅನುಪಾತ’ ಎಂಬ ಹೆಸರಿನಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಭಾರತದ ಎಲ್ಲ ಪ್ರಮುಖ ಕಂಪೆನಿಗಳಲ್ಲಿಯೂ ಸಮೀಕ್ಷೆ ಮಾಡಲಾಗಿದೆ. 50ಕ್ಕಿಂತ ಹೆಚ್ಚು ಸಿಬ್ಬಂದಿ ಇರುವ ಕಂಪೆನಿಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಟ್ಟು ಮೂರು ಲಕ್ಷ ಮಹಿಳೆಯರಿಂದ ಮಾಹಿತಿ ಸಂಗ್ರಹಿಸಲಾಗಿದೆ.

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಮಹಿಳೆಯರು ಸೇರುವ ಪ್ರಮಾಣ ಕಡಿಮೆ ಎಂಬ ಮನೋಭಾವಕ್ಕೆ ಈ ಸಮೀಕ್ಷೆ ಇನ್ನಷ್ಟು ಒತ್ತು ನೀಡಿದೆ.

ವೃತ್ತಿಯಲ್ಲಿ ಮಹಿಳೆಯರ ಏಳಿಗೆಯ ಬಗ್ಗೆಯೂ ವಿಶ್ಲೇಷಣೆ ನಡೆಸಲಾಗಿದೆ. ಸಾಮಾನ್ಯವಾಗಿ, ಆರು ವರ್ಷಗಳ ಅನುಭವ ಹೊಂದಿರುವ ಗಂಡಸರಿಗೆ ವ್ಯವಸ್ಥಾಪಕ ಮಟ್ಟದ ಹುದ್ದೆಗೆ ಬಡ್ತಿ ದೊರೆಯುತ್ತದೆ. ಆದರೆ ಮಹಿಳೆಯರು ಇಂತಹ ಬಡ್ತಿ ಪಡೆಯಲು ಎಂಟು ವರ್ಷಗಳ ಅನುಭವ ಬೇಕು.

ಹಾಗೆಯೇ ಸುಮಾರು ಎಂಟು ವರ್ಷಗಳ ಅನುಭವದ ಬಳಿಕ ಶೇ 45ರಷ್ಟು ಮಹಿಳೆಯರು ತಂತ್ರಜ್ಞಾನ ಆಧರಿತ ಕೆಲಸದಿಂದ ಬೇರೆಡೆಗೆ ಹೋಗುತ್ತಾರೆ. ತಾಂತ್ರಿಕ ಕೆಲಸಗಳನ್ನು ಬಿಡುವ ಈ ಮಹಿಳೆಯರು ಉತ್ಪನ್ನ ನಿರ್ವಾಹಕರು, ಮಾರಾಟ ವ್ಯವಸ್ಥಾಪಕರು ಅಥವಾ ಸಲಹೆಗಾರರಂತಹ ಕೆಲಸಗಳಿಗೆ ಸೇರುತ್ತಾರೆ.

ಪ್ರೋಗ್ರಾಮಿಂಗ್‌ ಕೆಲಸಗಳಿಗೆ ಹೋಲಿಸಿದರೆ ಉತ್ಪನ್ನ ಪರೀಕ್ಷೆಯ ಕೆಲಸಗಳಲ್ಲಿ ಹೆಚ್ಚು ಮಹಿಳೆಯರಿದ್ದಾರೆ. ಉತ್ಪನ್ನ ಪರೀಕ್ಷೆಯ ಕೆಲಸಗಳಿಗೆ ಬೇಡಿಕೆ ಕಡಿಮೆ ಇದೆ. ಹಾಗೆಯೇ ಪ್ರೋಗ್ರಾಮಿಂಗ್‌ಗೆ ಹೋಲಿಸಿದರೆ ಉತ್ಪನ್ನ ಪರೀಕ್ಷಕರ ಹುದ್ದೆಗಳ ಸಂಖ್ಯೆಯೂ ಬಹಳ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT