7

‘ನಿನ್ನನ್ನು ತಿದ್ದುವ ಜಿದ್ದು ನನ್ನದಲ್ಲ’

Published:
Updated:
‘ನಿನ್ನನ್ನು ತಿದ್ದುವ ಜಿದ್ದು ನನ್ನದಲ್ಲ’

ಹಸೆಮಣೆಯಲ್ಲಿ ಕುಳಿತ ವಧು–ವರರು ಸಂಭಾಷಣೆ ನಡೆಸುತ್ತಿದ್ದರೆ... ಅನುಷ್ಕಾಗೆ ವಿರಾಟ್‌ ‘ಜೀವನದ ಪ್ರತಿ ಹಂತದಲ್ಲೂ ಜೊತೆಗಿರುತ್ತೇನೆ’ ಎಂದು ಭರವಸೆ ನೀಡುತ್ತಾ ಹೋಗುತ್ತಾರೆ.

ಮಾನ್ಯಾವರ್‌ ಕಂಪೆನಿಯ ‘ನಯೆ ರಿಷ್ತೆ ನಯೆ ವಾದೆ’ ಹೆಸರಿನ ಹೊಸ ಜಾಹೀರಾತಿನಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ನಿಜ ಬದುಕಿನಲ್ಲಿ ಪ್ರೇಮಿಗಳಾಗಿ ಕಾಣಿಸಿಕೊಂಡಿರುವ ಇವರಿಬ್ಬರು ಜಾಹೀರಾತಿನಲ್ಲಿ ಅದ್ಭುತವಾಗಿ ತಮ್ಮೊಳಗಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ಮುದ್ದಾಗಿ ಸಿಂಗಾರಗೊಂಡ ಜೋಡಿಯೊಂದಿಗೆ ಹಸೆಮಣೆಯಲ್ಲಿ ನಾಚುತ್ತಾ ಮಾತನಾಡುತ್ತಿದ್ದರೆ, ಅವರೇನು ಮಾತನಾಡಿಕೊಳ್ಳುತ್ತಿರಬಹುದು ಎಂದು ಅನುಷ್ಕಾ– ವಿರಾಟ್‌ ಊಹಿಸಿ, ಅದರಂತೆ ಮಾತನಾಡಲು ಆರಂಭಿಸುತ್ತಾರೆ.

ವಿರಾಟ್‌, ತಿಂಗಳಲ್ಲಿ 15 ದಿನ ಅಡುಗೆ ಮಾಡುವುದಾಗಿ ಹೇಳಿದಾಗ, ಯಾವುದೇ ದೂರು ಹೇಳದೇ ಅದನ್ನು ತಿನ್ನುವುದಾಗಿ ಅನುಷ್ಕಾ ಮಾತು ನೀಡುತ್ತಾರೆ. ಎಲ್ಲಾ ರಹಸ್ಯಗಳನ್ನು ಕಾಪಾಡುವುದಾಗಿ ಅನುಷ್ಕಾ ಮಾತು ನೀಡಿದರೆ, ‘ನಿನ್ನನ್ನು ಬದಲಿಸುವ ಜಿದ್ದಿಗೆ ಬೀಳುವುದಿಲ್ಲ, ಈಗಿರುವಂತೆಯೇ ಸ್ವೀಕರಿಸುತ್ತೇನೆ’ ಎಂದು ವಿರಾಟ್‌ ಭರವಸೆ ನೀಡುತ್ತಾರೆ.

‘ತಿಂಗಳಲ್ಲಿ ಕೆಲವು ದಿನ ನಿನಗೂ ಕೇರಂ ಆಟದಲ್ಲಿ ಗೆಲ್ಲಲು ಅವಕಾಶ ನೀಡುತ್ತೇನೆ, ಆದರೆ ಪ್ರತಿ ಬಾರಿ ಅಲ್ಲ' ಎಂದು ತುಂಟನಗುವಿನ ಅನುಷ್ಕಾ ಮಾತಿಗೆ ವಿರಾಟ್‌ ಒಪ್ಪಿಕೊಂಡು ‘ಯಾವುದೇ ಟಿ.ವಿ. ಕಾರ್ಯಕ್ರಮವನ್ನೂ ನೀನು ಜೊತೆಗಿರದಿದ್ದರೆ ನೋಡಲಾರೆ' ಎನ್ನುತ್ತಾರೆ.

ಜಾಹೀರಾತಿನ ಕೊನೆಗೆ ಒಬ್ಬರಿಗೊಬ್ಬರು ಕಣ್ಣನ್ನು ನೋಡಿಕೊಳ್ಳುತ್ತಾ ಪರಸ್ಪರರ ಬಗೆಗೆ ಇಬ್ಬರೂ ಕಾಳಜಿ ವಹಿಸಿಕೊಳ್ಳುತ್ತೇವೆ ಎಂದು ಶಪಥ ಮಾಡುತ್ತಾರೆ. ಮದುಮಕ್ಕಳ ಮಾತಿನಂತೆ ಮಾತನಾಡುವ ಇಬ್ಬರಿಗೂ ತಾವು ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಕೊನೆಗೇ ಅರಿವಾಗುತ್ತದೆ. ಒಬ್ಬರಿಗೊಬ್ಬರು ಜೋಪಾನ ಮಾಡುವ ಅಂತಿಮ ಮಾತಿನೊಂದಿಗೆ ಸಂಬಂಧ ಗಟ್ಟಿಯಾಗುವುದರಲ್ಲಿ ಜಾಹೀರಾತು ಮುಗಿಯುತ್ತದೆ.

#NayeRishteNayeVaade ಮೂಲಕ ಟ್ವಿಟರ್‌ ಟ್ರೆಂಡ್‌ ಸೃಷ್ಟಿಯಾಗಿದ್ದು, ಅನುಷ್ಕಾ ಹಾಗೂ ವಿರಾಟ್‌ನ ಅಭಿಮಾನಿಗಳು ಜಾಹೀರಾತಿನ ಫೋಟೊಗಳು, ವಿಡಿಯೊವನ್ನು ಹಂಚಿಕೊಂಡಿದ್ದಾರೆ. 1.30 ನಿಮಿಷದ ಜಾಹೀರಾತನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry