ನೀನು ಪ್ರಾಮಾಣಿಕನಿರಬಹುದು; ನನ್ನನ್ನು ಭ್ರಷ್ಟ ಎನ್ನಬೇಡ

ಮಂಗಳವಾರ, ಜೂನ್ 18, 2019
23 °C

ನೀನು ಪ್ರಾಮಾಣಿಕನಿರಬಹುದು; ನನ್ನನ್ನು ಭ್ರಷ್ಟ ಎನ್ನಬೇಡ

Published:
Updated:
ನೀನು ಪ್ರಾಮಾಣಿಕನಿರಬಹುದು; ನನ್ನನ್ನು ಭ್ರಷ್ಟ ಎನ್ನಬೇಡ

ಮೈಸೂರು: ‘ನೀನು ಪ್ರಾಮಾಣಿಕನಿರಬಹುದು; ಆದರೆ, ನನ್ನನ್ನು ಭ್ರಷ್ಟ ಎಂದು ಹೇಳುವ ಅಧಿಕಾರ ನಿನಗಿಲ್ಲ...’

ಹೀಗೆಂದು ಏಕವಚನದಲ್ಲಿ ವೈದ್ಯಕೀಯ ಸಚಿವ ರಮೇಶಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತೀಯ ವೈದ್ಯಕೀಯ ಮಂಡಳಿಯ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಎನ್.ರವೀಂದ್ರ. ‘ರಮೇಶಕುಮಾರ್‌ ಅವರು ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರಿಗೆ ತಾನು ಪ್ರಾಮಾಣಿಕ, ಬುದ್ಧಿವಂತ ಎನ್ನುವುದು ತಲೆಯಲ್ಲಿ ಕುಳಿತಿದೆ. ನನ್ನ ಕುರಿತ ಹೇಳಿಕೆಗೆ ಬೇಸರವಿಲ್ಲ. ಅದರೆ, ವೈದ್ಯರನ್ನು ಕ್ಷೌರಿಕರು, ಕಿಸೆಗಳ್ಳರು ಎಂದು ಕರೆದಿರುವುದು ಅಕ್ಷಮ್ಯ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

‘ವೈದ್ಯರ ವರ್ಗಾವಣೆ ಪಟ್ಟಿಯನ್ನು ನೋಡಿದರೆ, ಅವರ ಪ್ರಾಮಾಣಿಕತೆಯ ಮಟ್ಟ ಎಂಥದ್ದು ಎಂದು ಗೊತ್ತಾಗುತ್ತದೆ. ಅವರ ಬಣ್ಣವನ್ನು ನಾನು ಬಯಲು ಮಾಡಬೇಕಿಲ್ಲ. ನನ್ನ ವೃತ್ತಿಯನ್ನು ಹಳಿದರೆ ಅದನ್ನು ಸಹಿಸಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ’ ಎಂದರು.

ವೈದ್ಯರ ವಿರುದ್ಧ ಹೇಳಿಕೆಗೆ ಸಚಿವರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry