ಕರಡಿ ದಾಳಿ: ತೀವ್ರವಾಗಿ ಗಾಯಗೊಂಡ ರೈತ

ಮಂಗಳವಾರ, ಜೂನ್ 25, 2019
22 °C

ಕರಡಿ ದಾಳಿ: ತೀವ್ರವಾಗಿ ಗಾಯಗೊಂಡ ರೈತ

Published:
Updated:
ಕರಡಿ ದಾಳಿ: ತೀವ್ರವಾಗಿ ಗಾಯಗೊಂಡ ರೈತ

ಬಸವಾಪಟ್ಟಣ (ದಾವಣಗೆರೆ ಜಿಲ್ಲೆ): ಸಮೀಪದ ಯಲೋದಹಳ್ಳಿಯಲ್ಲಿ ಭಾನುವಾರ ಮುಂಜಾನೆ ಜೋಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಪರಸಪ್ಪ (50) ಎಂಬುವವರ ಮೇಲೆ ಕರಡಿಯೊಂದು ಹಠಾತ್‌ ದಾಳಿ ನಡೆಸಿ, ಆತನ ಬಲಗೈಯನ್ನು ಕಚ್ಚಿ ಗಾಯಗೊಳಿಸಿದೆ.

ದಾಳಿಯಿಂದ ಕೈ ಮಾಂಸಖಂಡ ಕಿತ್ತು ಬಂದಿದೆ. ರೈತನ ಕಿರುಚಾಟ ಕೇಳಿ ಆತನ ಮಗ ಹಾಗೂ ಇತರ ರೈತರು ನೆರವಿಗೆ ಧಾವಿಸಿದಾಗ ಕರಡಿ ಓಡಿಹೋಗಿದೆ. ದಾಗಿನಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ರೈತ ಸಂಘದ ಕಾರ್ಯದರ್ಶಿ ಎಸ್‌.ಆರ್‌.ರವಿಕುಮಾರ್‌ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry