7

ಹೋಮ್‌ಸ್ಟೇ ಉತ್ತೇಜನಕ್ಕೆ ರಾಷ್ಟ್ರೀಯ ನೀತಿ ಪ್ರಕಟ?

Published:
Updated:
ಹೋಮ್‌ಸ್ಟೇ ಉತ್ತೇಜನಕ್ಕೆ ರಾಷ್ಟ್ರೀಯ ನೀತಿ ಪ್ರಕಟ?

ನವದೆಹಲಿ : ಹೋಮ್‌ಸ್ಟೇಗಳಿಗೆ ಸಂಬಂಧಿಸಿದ ರಾಷ್ಟ್ರೀಯ ನೀತಿ ಮತ್ತು ಮಾನ್ಯತೆ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ. ಪ್ರವಾಸೋದ್ಯಮ ಸಚಿವಾಲಯವು ಇದಕ್ಕೆ ಸಂಬಂಧಿಸಿದ ಸಮಾಲೋಚನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಮುಂದಿನ ವಾರವೇ ಈ ನೀತಿ ಪ್ರಕಟವಾಗುವ ನಿರೀಕ್ಷೆ ಇದೆ.

ಪ್ರವಾಸ ಸಮನ್ವಯ ಸಂಸ್ಥೆಗಳಾದ ಏರ್‌ ಬಿ ಎಂಡ್‌ ಬಿ, ಮೇಕ್‌ ಮೈ ಟ್ರಿಪ್‌, ಯಾತ್ರಾ ಮತ್ತು ಓಯೊ ಜತೆಗೆ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ಚರ್ಚೆ ನಡೆಸಿದ್ದು ಹೋಮ್‌ಸ್ಟೇಗಳಿಗೆ ಪ್ರೋತ್ಸಾಹ ನೀಡುವ ರೂಪುರೇಷೆ ಸಿದ್ಧಪಡಿಸಿದ್ದಾರೆ.

‘ಹೋಮ್‌ಸ್ಟೇಗಳಿಗೆ ಪ್ರೋತ್ಸಾಹ ನೀಡುವುದರಿಂದ ಸ್ಥಳೀಯ ಕುಟುಂಬಗಳಿಗೆ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತದೆ. ಪ್ರವಾಸಿಗರಿಗೆ ಮನೆಯ ಅನುಭವ ದೊರೆಯುತ್ತದೆ ಮತ್ತು ಈಗ ನಿರುಪಯುಕ್ತವಾಗಿರುವ ಕಟ್ಟಡಗಳ ಬಳಕೆ ಸಾಧ್ಯವಾಗುತ್ತದೆ. ಅಕ್ಟೋಬರ್‌ ಕೊನೆಯೊಳಗೆ ಹೋಮ್‌ಸ್ಟೇ ನೀತಿ ಪ್ರಕಟವಾಗಲಿದೆ’ ಎಂದು ಪ್ರವಾಸೋದ್ಯಮ ಕಾರ್ಯದರ್ಶಿ ರಶ್ಮಿ ವರ್ಮಾ ಹೇಳಿದ್ದಾರೆ.

ದೇಶದಲ್ಲಿ ಈಗ ಎರಡು ಲಕ್ಷದಷ್ಟು ಹೋಟೆಲ್ ಕೊಠಡಿಗಳ ಕೊರತೆ ಇದೆ. ಸ್ಥಳೀಯ ಕುಟುಂಬಗಳು ತಮ್ಮ ಮನೆಯಲ್ಲಿ ಕೊಠಡಿಗಳನ್ನು ಪ್ರವಾಸಿಗರಿಗೆ ಬಾಡಿಗೆಗೆ ಕೊಡುವ ಮೂಲಕ ಈ ಕೊರತೆಯನ್ನು ತುಂಬುವುದು ಹೊಸ ಹೋಮ್‌ಸ್ಟೇ ನೀತಿಯ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರವಾನಗಿ ಸರಳ?

ಪರವಾನಗಿ ನಿಯಮಗಳನ್ನು ಸುಲಭಗೊಳಿಸುವ ಬಗ್ಗೆಯೂ ಪ್ರವಾಸೋದ್ಯಮ ಸಚಿವಾಲಯ ಚಿಂತಿಸುತ್ತಿದೆ. ಹೋಮ್‌ಸ್ಟೇಗಳು ಈಗ ಪ್ರಾದೇಶಿಕ ಸಮಿತಿಯಿಂದ ಪರವಾನಗಿ ಪಡೆದುಕೊಳ್ಳಬೇಕು. ಈ ಸಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರದ ಪ್ರತಿನಿಧಿಗಳು ಇರುತ್ತಾರೆ. ಪರವಾನಗಿಯನ್ನು ಎರಡು ವರ್ಷಕ್ಕೊಮ್ಮೆ ನವೀಕರಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry