ಒಂಬತ್ತು ದಿನಗಳ ಬಳಿಕ ನಿಂಗಮ್ಮ ಶವ ಪತ್ತೆ

ಮಂಗಳವಾರ, ಜೂನ್ 25, 2019
23 °C

ಒಂಬತ್ತು ದಿನಗಳ ಬಳಿಕ ನಿಂಗಮ್ಮ ಶವ ಪತ್ತೆ

Published:
Updated:
ಒಂಬತ್ತು ದಿನಗಳ ಬಳಿಕ ನಿಂಗಮ್ಮ ಶವ ಪತ್ತೆ

ಬೆಂಗಳೂರು: ಕುರುಬರಹಳ್ಳಿಯ ಜೆ.ಸಿ.ನಗರದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ನಿಂಗಮ್ಮ ಅವರ ಶವ ಒಂಬತ್ತು ದಿನಗಳ ಬಳಿಕ ಜ್ಞಾನಭಾರತಿ ಸಮೀಪದ ವೃಷಭಾವತಿ ಕಾಲುವೆಯಲ್ಲಿ ಭಾನುವಾರ ಪತ್ತೆಯಾಯಿತು.

ಇದೇ 13ರಂದು ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಿಂಗಮ್ಮ ಹಾಗೂ ಅವರ ಪುತ್ರಿ ಪುಷ್ಪಾ ಕೊಚ್ಚಿ ಹೋಗಿದ್ದರು. ಪುಷ್ಪಾ ಶವ ಕುಂಬಳಗೋಡು ಸೇತುವೆ ಬಳಿ ಇದೇ 16ರಂದು ಪತ್ತೆಯಾಗಿತ್ತು. ನಿಂಗಮ್ಮ ಅವರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು (ಎನ್‌ಡಿಆರ್‌ಎಫ್‌) 41 ಕಿ.ಮೀ. ಶೋಧ ಕಾರ್ಯ ನಡೆಸಿತ್ತು. ಕಾಲುವೆಯ ಆಳ ಇರುವ ಪ್ರದೇಶಗಳಲ್ಲಿ ಶವ ಸಿಕ್ಕಿಕೊಂಡಿರಬಹುದು ಎಂದು ಶಂಕಿಸಿದ ಎನ್‌ಡಿಆರ್‌ಎಫ್‌ ತಂಡ, 22 ಸ್ಥಳಗಳನ್ನು ಗುರುತಿಸಿ ಶೋಧ ಕಾರ್ಯ ಮುಂದುವರಿಸಿತ್ತು.

₹5 ಲಕ್ಷ ಪರಿಹಾರ ವಿತರಣೆ:

ಸಿ.ವಿ.ರಾಮನ್‌ನಗರದ ಕೃಷ್ಣಪ್ಪ ಗಾರ್ಡನ್‌ನ ಕೊಳೆಗೇರಿಯಲ್ಲಿ ಮೃತಪಟ್ಟಿದ್ದ ನರಸಮ್ಮ (18) ಅವರ ಕುಟುಂಬದ ಸದಸ್ಯರಿಗೆ ₹5 ಲಕ್ಷ ಪರಿಹಾರವನ್ನು ಮೇಯರ್‌ ಆರ್‌.ಸಂಪತ್‌ ರಾಜ್‌ ಭಾನುವಾರ ವಿತರಿಸಿದರು.

ನರಸಮ್ಮ ಬಯಲು ಶೌಚಕ್ಕೆ ಹೋಗಿ ರಾಜಕಾಲುವೆಗೆ ಬಿದ್ದು ಇದೇ 15ರಂದು ಮೃತಪಟ್ಟಿದ್ದರು.

ಕೊಳೆಗೇರಿಯಲ್ಲಿ ಶೌಚಾಲಯ ನಿರ್ಮಿಸುವಂತೆ ಸ್ಥಳೀಯರು ಮನವಿ ಮಾಡಿದರು. ‘ಶೀಘ್ರದಲ್ಲೇ ಅದನ್ನು ಕಟ್ಟಿಸಿಕೊಡುತ್ತೇವೆ’ ಎಂದು ಮೇಯರ್‌ ಭರವಸೆ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry