ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುವಾದಿಗಳ ಆಡಳಿತದಿಂದ ನಲುಗಿದ ದೇಶ

Last Updated 23 ಅಕ್ಟೋಬರ್ 2017, 5:04 IST
ಅಕ್ಷರ ಗಾತ್ರ

ದೇವನಹಳ್ಳಿ: ಮೂರು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕೋಮುವಾದಿ ಪಕ್ಷಗಳಿಂದ ದೇಶ ನಲುಗಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಬಿ.ಎಸ್.ಪಿ.ಸಂಸ್ಥಾಪಕ ಅಧ್ಯಕ್ಷ ಕಾನ್ಸಿರಾಮ್ ರವರ 11 ನೇ ವರ್ಷದ ಮತ್ತು ಕೋರಮಂಗಲ ಮುನಿಯಪ್ಪನವರ ಎರಡನೇ ವರ್ಷದ ಪರಿನಿಬ್ಬಾಣ ದಿನಾಚರಣೆಯಲ್ಲಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಜಾತಿಗಳನ್ನು ಒಡೆದು ಆಡಳಿತ ನಡೆಸುತ್ತದೆ. ಬಿಜೆಪಿ ಧರ್ಮಗಳನ್ನು ಇಬ್ಭಾಗ ಮಾಡಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ಪಕ್ಷಗಳು ಹಿಂದುಳಿದ ವರ್ಗಕ್ಕೆ ಮೀಸಲು ಕಲ್ಪಿಸಲು ರಚನೆಗೊಂಡಿದ್ದ ಮಂಡಲ್ ವರದಿ ವಿರೋಧಿಗಳು ಎಂದು ಟೀಕಿಸಿದರು.

ಕಪ್ಪು ಹಣ ತರುವುದಾಗಿ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದ ಬಿಜೆಪಿ ನೋಟು ರದ್ದತಿ ಬರೆ ಎಳೆಯಿತು, ಉದ್ಯೋಗ ಸೃಷ್ಟಿ ಭರವಸೆ ಮೂಲೆಗುಂಪಾಗಿದೆ ಎಂದರು.
ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಶ್ರಮಿಕರ ಬೆವರಿನ ಹಣ ಬೃಹತ್ ಕಂಪೆನಿ ಮಾಲೀಕರಿಗೆ ಸಾಲ ನೀಡಿ ಮನ್ನಾ ಮಾಡುವುದರಲ್ಲೇ ಮುಗಿಯುತ್ತಿದೆ ಎಂದರು.
ಸರ್ಕಾರ ರೈತರಿಗೆ ಯಾವುದೇ ಉತ್ತಮ ಯೋಜನೆಗಳನ್ನು ನೀಡುತ್ತಿಲ್ಲ ಎಂದು ಟೀಕಿಸಿದರು.

ಬಹುಜನ ಸಮಾಜ ಪಕ್ಷ ಜಿಲ್ಲಾ ಘಟಕದ ಅಧ್ಯಕ್ಷ ನಂದಿಗುಂದ ವೆಂಕಟೇಶ್ ಮಾತನಾಡಿ, ಈ ಪಕ್ಷ ದಲಿತರ ಪಕ್ಷವಲ್ಲ, ಎಲ್ಲಾ ಸಮುದಾಯದಲ್ಲಿರುವ ಶೋಷಿತರ ಪಕ್ಷ ಎಂದರು. ಮುಂದಿನ ಚುನಾವಣೆಯಲ್ಲಿ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಬೇಕು. ಪಕ್ಷದಲ್ಲಿ ಮತ ಜಾಗೃತಿಯಾಗಬೇಕು ಎಂದರು.

ಪಕ್ಷದ ರಾಜ್ಯ ಘಟಕ ಉಪಾಧ್ಯಕ್ಷ ಆರ್.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಮತ್ತು ಪ್ರೊ. ಹರಿರಾಮ್, ಕಾರ್ಯದರ್ಶಿ ಈರಣ್ಣ ಮೌರ್ಯ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಮಾದೇವಿ, ಜಿಲ್ಲಾ ಘಟಕ ಉಪಾಧ್ಯಕ್ಷರಾದ ನರಸಿಂಹರಾಜು, ವೆಂಕಟಸ್ವಾಮಪ್ಪ, ಪೂಜಪ್ಪ, ಜಿಲ್ಲಾ ಕಾರ್ಯದರ್ಶಿ ರತ್ನಮ್ಮ, ತಾಲ್ಲೂಕು ಘಟಕ ಅಧ್ಯಕ್ಷ ಜುಟ್ಟನಹಳ್ಳಿ ವೆಂಕಟೇಶ್, ತಾಲ್ಲೂಕು ಸಂಯೋಜಕ ಸಿ.ಮುನಿಯಪ್ಪ, ಬಹುಜನ ವಿದ್ಯಾರ್ಥಿ ಜಿಲ್ಲಾ ಘಟಕ ಅಧ್ಯಕ್ಷ ಮಹೇಶ್ ದಾಸ್, ತಾಲ್ಲೂಕು ಘಟಕ ಅಧ್ಯಕ್ಷ ಕಾರಹಳ್ಳಿ ಕೇಶವ, ತಾಲ್ಲೂಕು ಘಟಕ ಉಪಾಧ್ಯಕ್ಷ ಮಂಜುನಾಥ್, ಮುಖಂಡ ಮುನಿಕೃಷ್ಣ, ನರಸಿಂಹಮೂರ್ತಿ, ತಿಮ್ಮರಾಜು, ಜನಾರ್ದನ, ದಿನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT