ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಪ್ರಶಿಕ್ಷಣಾರ್ಥಿಗಳು

Last Updated 23 ಅಕ್ಟೋಬರ್ 2017, 5:15 IST
ಅಕ್ಷರ ಗಾತ್ರ

ಖಾನಾಪುರ: ಪಟ್ಟಣದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಭಾನುವಾರ ಇಲ್ಲಿನ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯ 300ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಂಡರು

ಪ್ರಾಂಶುಪಾಲ ಎಂ. ಕುಮಾರ ನೇತೃತ್ವದಲ್ಲಿ ಬಸ್ ನಿಲ್ದಾಣದ ಆವರಣ ಸ್ವಚ್ಛಗೊಳಿಸಿ, ಗುಂಡಿಗಳನ್ನು ಮಣ್ಣಿನಿಂದ ಮುಚ್ಚಿದರು. ಬಸ್‌ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

‘ನಮ್ಮ ಊರು’ ಶೀರ್ಷಿಕೆಯಡಿ ಕೈಗೊಂಡ ಶ್ರಮದಾನವನ್ನು ಸಂಗೀತ ವಿದ್ವಾಂಸ ಬಿ.ಎಂ. ವಾಲಿಕೆ ಉದ್ಘಾಟಿಸಿದರು. ‘ಭಾನುವಾರ ಅಥವಾ ರಜಾದಿನಗಳಂದು ಪ್ರಶಿಕ್ಷಣಾರ್ಥಿಗಳು ಶ್ರಮದಾನದ ಮೂಲಕ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಿದ್ದಾರೆ.

ಮೊದಲ ಹಂತದಲ್ಲಿ ಮೂರು ರಾಜ್ಯಗಳಿಗೆ ಸಂಪರ್ಕ ಕೊಂಡಿಯಾದ ಬಸ್ ನಿಲ್ದಾಣ ಸ್ವಚ್ಛಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ರಸ್ತೆ, ರೈಲು ನಿಲ್ದಾಣ, ಸರ್ಕಾರಿ ಕಚೇರಿಗಳು ಮತ್ತು ಆಸ್ಪತ್ರೆಗಳಲ್ಲಿ ಶ್ರಮದಾನ ಮಾಡಲಾಗುವುದು’ ಎಂದು ಪ್ರಾಂಶುಪಾಲ ಕುಮಾರ್ ತಿಳಿಸಿದರು. ಥಾವರೆಪ್ಪ, ರಿಯಾಜ್ ಮುನವಳ್ಳಿ, ಪಿ.ಎಸ್. ಪಾಟೀಲ, ಬಿ.ಎಸ್. ಕುಶಾಲ, ಎಸ್.ಕೆ. ಭಜಂತ್ರಿ, ಆರ್.ಪಿ. ಉಪಾಸೆ, ಬಿ.ವಿ. ಮಳಿಮಠ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT