ಕಣ್ಮರೆಯಾಗಿದ್ದ ಬಾಲಕಿ ಶೆರಿನ್‌ ಶವವಾಗಿ ಪತ್ತೆ?

ಮಂಗಳವಾರ, ಜೂನ್ 25, 2019
27 °C
ಮನೆಯಿಂದ ಹೊರ ನಿಲ್ಲುವ ಶಿಕ್ಷೆ ನೀಡಿದ್ದ ಪೋಷಕರು

ಕಣ್ಮರೆಯಾಗಿದ್ದ ಬಾಲಕಿ ಶೆರಿನ್‌ ಶವವಾಗಿ ಪತ್ತೆ?

Published:
Updated:
ಕಣ್ಮರೆಯಾಗಿದ್ದ ಬಾಲಕಿ ಶೆರಿನ್‌ ಶವವಾಗಿ ಪತ್ತೆ?

ಹ್ಯೂಸ್ಟನ್‌, ಅಮೆರಿಕ: ಕಣ್ಮರೆಯಾಗಿದ್ದ ಭಾರತ ಸಂಜಾತ ಬಾಲಕಿ ಶೆರಿನ್‌ ಮ್ಯಾಥ್ಯೂಸ್‌ ಹೋಲುವಂಥ ಬಾಲಕಿಯ ಶವ ಪತ್ತೆಯಾಗಿದೆ ಎಂದು ಟೆಕ್ಸಾಸ್‌ ಪೊಲೀಸರು ತಿಳಿಸಿದ್ದಾರೆ.

‘ಮೂರು ವರ್ಷದ ಬಾಲಕಿಯ ಶವ ಡಲ್ಲಾಸ್‌ ಎಕ್ಸ್‌ಪ್ರೆಸ್‌ ವೇ ನ ಸುರಂಗ ಮಾರ್ಗದಲ್ಲಿ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಬಾಲಕಿಯ ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಈ ಶವ ಪತ್ತೆಯಾಗಿದೆ. ಶವದ ಗುರುತು ಪತ್ತೆಯಾಗಿಲ್ಲ. ಇದು ನಾಪತ್ತೆಯಾಗಿದ್ದ ಬಾಲಕಿಯ ಶವ ಇರಬಹುದು ಎಂಬ ಶಂಕೆ ಇದೆ’ ಎಂದು ಟೆಕ್ಸಾಸ್‌ ಪೊಲೀಸರು ಹೇಳಿದ್ದಾರೆ.

ವೆಸ್ಲೆ ಮ್ಯಾಥ್ಯೂಸ್‌ ಎಂಬುವರು ಬಿಹಾರದ ನಳಂದಾದಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಿಂದ ಕಳೆದ ವರ್ಷ ಶೆರಿನ್‌ಳನ್ನು ದತ್ತು ಪಡೆದಿದ್ದರು. ಅಕ್ಟೋಬರ್‌ 7ರಂದು ಶೆರಿನ್‌ ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ ವೆಸ್ಲೆ ಮ್ಯೂಥ್ಯೂಸ್‌ ಅವರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಕೆಯನ್ನು ಮನೆಯಿಂದ ಹೊರಗೆ ನಿಲ್ಲುವ ಶಿಕ್ಷೆ ನೀಡಿದ್ದರು. ಅವರು ಸ್ವಲ್ಪ ಹೊತ್ತಿನ ನಂತರ ಬಂದು ನೋಡಿದಾಗ ಶೆರಿನ್‌ ನಾಪತ್ತೆಯಾಗಿದ್ದಳು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry