ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆಗೆ ಹೆಚ್ಚಿನ ಬೆಳೆ ಹಾನಿ

Last Updated 23 ಅಕ್ಟೋಬರ್ 2017, 6:58 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಗೆ ಕುಪ್ಪೇಲೂರು ಹಾಗೂ ಮೇಡ್ಲೇರಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 540 ಹೆಕ್ಟೇರ್‌ಗೂ ಅಧಿಕ ಭತ್ತ ಹಾಗೂ 465 ಹೆಕ್ಟೇರ್‌ಗೂ ಗೋವಿನಜೋಳ ಬೆಳೆ ಹಾನಿಯಾಗಿದೆ.

ಮೇಡ್ಲೇರಿ ಗ್ರಾಮದ ಕೆರೆ ಕೋಡಿ ಬಿದ್ದ ಪರಿಣಾಮ ನೂರಾರು ಎಕರೆ ಭತ್ತ ಮತ್ತು ಗೋವಿನಜೋಳ, ಆರೇಮಲ್ಲಾಪುರ ಗ್ರಾಮದಲ್ಲಿ ಕೆರೆ ಒಡೆದು ಸುಮಾರು 300 ಎಕರೆಗೂ ಹೆಚ್ಚು ಗೋವಿನಜೋಳ, ಭತ್ತದ ಬೆಳೆ ಹಾನಿಯಾಗಿದೆ. ಈ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿದ್ದಾರೆ.

ಮೇಡ್ಲೇರಿಯ ಗುಡ್ಡಪ್ಪ ಬಿಲ್ಲಾಳ ಎಂಬುವವರ ನಾಲ್ಕು ಎಕರೆ ಗೋವಿನಜೋಳ ಸಂಪೂರ್ಣ ಜಲಾವೃತಗೊಂಡಿದೆ. ಮೇಡ್ಲೇರಿ, ಆರೇಮಲ್ಲಾಪುರ, ರಡ್ಡಿಯಲ್ಲಾಪುರ, ಸೋಮಲಾಪುರ, ಕೋಣನತಂಬಿಗಿ, ಹಿರೇಬಿದರಿ, ಐರಣಿ, ರಾವುತನಕಟ್ಟಿ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಧಾರಾಕಾರ ಮೆಳೆಯಾದ ಪರಿಣಾಮ ಎಲ್ಲ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. 

ಕೆಲವು ರಸ್ತೆಗಳ ಸೇತುವೆಗಳು ಕುಸಿತು ರಸ್ತೆ ಸಂಚಾರ ಸಂಪೂರ್ಣ ಬಂದ್‌ ಆಗಿದೆ ಎಂದು ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಸದಸ್ಯ ಬಸವರಾಜ ಹುಲ್ಲತ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT