ನಿವೃತ್ತ ನೌಕರರ ಪಿಂಚಣಿ ಹೆಚ್ಚಳಕ್ಕೆ ಒತ್ತಾಯ

ಸೋಮವಾರ, ಮೇ 27, 2019
33 °C

ನಿವೃತ್ತ ನೌಕರರ ಪಿಂಚಣಿ ಹೆಚ್ಚಳಕ್ಕೆ ಒತ್ತಾಯ

Published:
Updated:

ಕಲಬುರ್ಗಿ: ‘ಭವಿಷ್ಯನಿಧಿ ಸದಸ್ಯರಾಗಿರುವ ನೌಕರರಿಗೆ 1995ರಲ್ಲಿ ಜಾರಿಗೆ ತಂದಿರುವ ಇಪಿಎಸ್ 95ರ ಅನ್ವಯ ಪಿಂಚಣಿ ಮೊತ್ತವನ್ನು ಹೆಚ್ಚಿಸಬೇಕು’ ಎಂದು ಇಪಿಎಸ್‌ ಪಿಂಚಣಿದಾರರ ಸಮನ್ವಯ ಸಮಿತಿ ಅಧ್ಯಕ್ಷ ಪ್ರಕಾಶ್ ಯಂಡೆ ಒತ್ತಾಯಿಸಿದರು.

ಜಿಲ್ಲಾ ಇಪಿಎಸ್ ಪಿಂಚಣಿದಾರರ ಸಂಘ ಹಾಗೂ ಬೆಳಗಾವಿ ಇಪಿಎಸ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಮಹಾ ಮಂಡಳಿಯಿಂದ ಭಾನುವಾರ ಇಲ್ಲಿ ಏರ್ಪಡಿಸಿದ್ದ ಇಪಿಎಸ್ ಪಿಂಚಣಿದಾರರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕೈಗಾರಿಕೆ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ 1995ರಲ್ಲಿ ಕೇಂದ್ರ ಸರ್ಕಾರವು ನೌಕರರ ಪಿಂಚಣಿ ಯೋಜನೆ (ಇಪಿಎಸ್) ಜಾರಿಗೆ ತಂದಿದೆ. ಆದರೆ ನಿವೃತ್ತಿ ಬಳಿಕ ಕೇವಲ ₹200 ರಿಂದ ₹2,500 ಪಿಂಚಣಿ ನೀಡಲಾಗುತ್ತಿದೆ. ನಿವೃತ್ತಿಯ ನಂತರ ಈ ಹಣವು ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಪಿಂಚಣಿ ಮೊತ್ತವನ್ನು ಹೆಚ್ಚಿಸಬೇಕು’ ಎಂದರು.

‘1971ರಿಂದ 1995ರ ವರೆಗೆ ಕುಟುಂಬ ಪಿಂಚಣಿ ನೀಡಲಾಗುತ್ತಿತ್ತು. ಇದರ ಪ್ರಕಾರ ನಿವೃತ್ತ ಸಿಬ್ಬಂದಿಗೆ ಪಿಂಚಣಿ ದೊರೆಯುತ್ತಿರಲಿಲ್ಲ. ಆದರೆ ಅವರು ಮೃತಪಟ್ಟಲ್ಲಿ ಅವರ ಕುಟುಂಬದ ಸದಸ್ಯರಿಗೆ ಪಿಂಚಣಿ ನೀಡಲಾಗುತ್ತಿತ್ತು. 1995ರಲ್ಲಿ ಈ ಕಾಯ್ದೆಗೆ ಬದಲಾವಣೆ ತಂದು ಇಪಿಎಸ್ 95 ಅನ್ನು ಜಾರಿಗೆ ತರಲಾಯಿತು. ಆದರೆ ಪಿಂಚಣಿ ಮೊತ್ತಳ ಹೆಚ್ಚಳವಾಗದ್ದರಿಂದ ನಿವೃತ್ತ ನೌಕರರು ಇಂದಿಗೂ ತೊಂದರೆ ಅನುಭವಿಸುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನೌಕರರ ಮೂಲ ಆದಾಯದ ಶೇ 1.16ರಷ್ಟು ಹಣವನ್ನು ಕೇಂದ್ರ ಸರ್ಕಾರ ಹಾಗೂ ಉದ್ಯೋಗ ನೀಡಿದ ಕಂಪೆನಿಗಳು ಭರಿಸುತ್ತಿವೆ. ನೌಕರನು ಕೂಡ ಶೇ 1.16ರಷ್ಟು ವಂತಿಗೆ ನೀಡಬೇಕು ಎಂಬ ಚರ್ಚೆ ನಡೆದಿದೆ. ಈ ಮೊತ್ತವನ್ನೂ ಹೆಚ್ಚಿಸಬೇಕು. ನಿವೃತ್ತ ನೌಕರರಿಗೆ ಸರಿಯಾದ ರೀತಿಯಲ್ಲಿ ಪಿಂಚಣಿ ಸಿಗುವಂತೆ ನೋಡಿ ಕೊಳ್ಳಬೇಕು’ ಎಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ಶ್ರೀಕಾಂತಾ ಚಾರ್ಯ ಮಣೂರ ಉದ್ಘಾಟಿಸಿದರು. ಶಾಸಕ ಅಮರನಾಥ ಪಾಟೀಲ, ಜಿಲ್ಲಾ ಇಪಿಎಸ್ ಪಿಂಚಣಿದಾರರ ಸಂಘದ ಸುಭಾಷ ಹೊದಲೂರಕರ್, ರಾಘವೇಂದ್ರ ಕುಲಕರ್ಣಿ, ರಾಜಶೇಖರ್ ಕೋಪರ್ಡಿ ಹಾಗೂ ವಿವಿಧ ಜಿಲ್ಲೆಗಳ ಪದಾಧಿಕಾರಿಗಳಾದ, ವೀರಭದ್ರಪ್ಪ, ಬಸವರಾಜ, ಮಲ್ಲಣಗೌಡ ಯಾದಗಿರಿ, ಎ.ಆರ್.ಚವಾಣ್, ಸೂರ್ಯಕಾಂತ ಇದ್ದರು.  ಜಿ.ವಿ.ಮಠ ಯಾದಗಿರಿ ಸ್ವಾತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry