ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ‘ಗುಡ್‌ಮಾರ್ನಿಂಗ್’ ಸ್ಟೇಟಸ್ ಹಾಕಿದ್ದ ವ್ಯಕ್ತಿಯ ಬಂಧನ

ತಪ್ಪು ಅನುವಾದದಿಂದ ಎಡವಟ್ಟು
Last Updated 23 ಅಕ್ಟೋಬರ್ 2017, 9:30 IST
ಅಕ್ಷರ ಗಾತ್ರ

ಇಸ್ರೇಲ್: ಫೇಸ್‌ಬುಕ್‌ನಲ್ಲಿ 'ಗುಡ್ ಮಾರ್ನಿಂಗ್' ಎಂದು ಸ್ಟೇಟಸ್ ಹಾಕಿದ್ದ ವ್ಯಕ್ತಿಯನ್ನು ಇಸ್ರೇಲ್ ಪೊಲೀಸರು ಬಂಧಿಸಿ ವಿಚಾರಣೆ ಬಳಿಕ ಬಿಡುಗಡೆ ಮಾಡಿದ ಘಟನೆ ನಡೆದಿದೆ.

ಪ್ಯಾಲೇಸ್ಟೀನ್‌ನ ಹಲಾವಿಮ್ ಹಲಾವಿ ಬಂಧನಕ್ಕೊಳಕ್ಕಾಗಿದ್ದ ವ್ಯಕ್ತಿ.

ಇವರು ಜೆಸಿಬಿ ಮುಂದೆ ನಿಂತಿದ್ದ ಫೋಟೋದ ಜತೆಗೆ ಅರೇಬಿಕ್ ಭಾಷೆಯಲ್ಲಿ 'ಗುಡ್‌ ಮಾರ್ನಿಂಗ್' ಎಂದು ಸ್ಟೇಟಸ್ ಹಾಕಿದ್ದರು.  ಅರೇಬಿಕ್‌ನಲ್ಲಿ ‘ಗುಡ್‌ ಮಾರ್ನಿಂಗ್’ ಎಂಬುದು ಫೇಸ್‌ಬುಕ್‌ನಲ್ಲಿ ಇಂಗ್ಲೀಷ್‌ಗೆ ಅನುವಾದಗೊಳ್ಳುವ ವೇಳೆ ‘ದಾಳಿ ನಡೆಸಿ‘ (Attack them) ಎಂದು ತಪ್ಪಾಗಿದೆ.

ಇದರಿಂದ ಅನುಮಾನಗೊಂಡ ಪೊಲೀಸರು ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಡಿ ಹಲಾವಿಮ್ ಹಲಾವಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇದು ತಪ್ಪಾಗಿ ಭಾಷಾಂತರಗೊಂಡಿದೆ ಎಂದು ತಿಳಿದು ಬಂದಿದೆ. ನಂತರ ಆತನನ್ನು ಬಿಡುಗಡೆಗೊಳಿಸಿದ್ದಾರೆ. 

ಬಂಧನದ ಬಳಿಕ ವ್ಯಕ್ತಿಯು ಚಿತ್ರ ಹಾಗೂ ಸ್ಟೇಟಸ್‌ ಅನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT