ಜನಮನ ಗೆಲ್ಲಲು ಸೇವೆಯೊಂದೇ ಮಾರ್ಗ

ಗುರುವಾರ , ಜೂನ್ 27, 2019
30 °C

ಜನಮನ ಗೆಲ್ಲಲು ಸೇವೆಯೊಂದೇ ಮಾರ್ಗ

Published:
Updated:

ಭಾರತೀನಗರ: ಜನರ ಮನ ಗೆಲ್ಲಲು ಉತ್ತಮ ಸೇವೆಯೊಂದೇ ಮಾರ್ಗವಾಗಿದೆ ಎಂದು ಸಿಪಿಐ ಶಿವಮಲವಯ್ಯ ಹೇಳಿದರು. ಇಲ್ಲಿನ ವಿಶ್ವಜ್ಞಾನಿ ಅಂಬೇಡ್ಕರ್‌ ಪ್ರಬುದ್ಧ ಸ್ವಾಭಿಮಾನಿ ಬಳಗ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ, ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಅಧಿಕಾರ ಬಂದಾಕ್ಷಣ ಅಹಂಕಾರ ಜೊತೆ ಜೊತೆಗೇ ಬಂದುಬಿಡುತ್ತದೆ. ಅದು ನಮ್ಮ ವ್ಯಕ್ತಿತ್ವ ಹಾಳು ಮಾಡುವುದರ ಜೊತೆಗೆ, ಪ್ರಪಾತಕ್ಕೆ ತಳ್ಳುತ್ತದೆ. ಅಧಿಕಾರ ಸಿಕ್ಕಾಗ ಉತ್ತಮ ಸೇವೆ ಮಾಡಿದರೆ ಮಾನಸಿಕ ನೆಮ್ಮದಿ ಲಭ್ಯವಾಗುವುದರ ಜೊತೆಗೆ ಜನರ ಮನಸ್ಸನ್ನು ಗೆಲ್ಲುವುದಕ್ಕೆ ಸಹಕಾರಿಯಾಗುತ್ತದೆ ಎಂದರು.

ಸಮತಾ ಸೈನಿಕ ದಳ ಜಿಲ್ಲಾ ಘಟಕದ ಅಧ್ಯಕ್ಷ ಕರಡಕೆರೆ ಯೋಗೇಶ್‌ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಜನರ ಮನಸ್ಸಿಗೆ ಹತ್ತಿರವಾಗುವುದು ಅಪರೂಪ. ಪೊಲೀಸ್‌ ಅಧಿಕಾರಿಗಳು ಜನರ ಮನಸ್ಸಿಗೆ ಹಿಡಿಸುವುದು ಇನ್ನು ದುರ್ಲಭ. ಅಂತಹ ಅಪರೂಪದ ಪೊಲೀಸ್‌ ಅಧಿಕಾರಿ ಶಿವಮಲವಯ್ಯ ಅವರ ಸೇವೆ ಮೆಚ್ಚುವಂತಹದ್ದು ಎಂದರು.

ಬಳಗದ ಅಧ್ಯಕ್ಷ ಅಮೀನ ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಚಿಕ್ಕರಸಿನಕೆರೆ ಎಂ. ಮೂರ್ತಿ, ಕಾಂಗ್ರೆಸ್‌ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಮುಡೀನಹಳ್ಳಿ ತಿಮ್ಮಯ್ಯ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಸಬ್ಬನಹಳ್ಳಿ ಕುಮಾರ, ಕೆ. ಶೆಟ್ಟಹಳ್ಳಿ ಪುಟ್ಟಣ್ಣ, ಕಾಡುಕೊತ್ತನಹಳ್ಳಿ ಬೊಮ್ಮರಾಜು, ಸಬ್ಬನಹಳ್ಳಿ ಸಿದ್ದರಾಜು, ವೆಂಕಟೇಶ ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry