ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯ ಮೆಟ್ಟಿನಿಂತ ಜಗದೀಶ್

Last Updated 23 ಅಕ್ಟೋಬರ್ 2017, 9:10 IST
ಅಕ್ಷರ ಗಾತ್ರ

ಮನುಷ್ಯನಲ್ಲಿ ಗುರಿ ಮತ್ತು ಸಾಧನೆಯ ತುಡಿತವೊಂದಿದ್ದರೆ ಸಾಕು, ದೈಹಿಕ ಅಂಗ ವೈಕಲ್ಯತೆಯನ್ನು ಮೆಟ್ಟಿನಿಂತು ಸ್ವಾಲಂಭಿ ಬದುಕು ತೋರಿಸಿದವರು ಉಡುಪಿಯ ಜಗದೀಶ್ ಭಟ್. ಜಿಲ್ಲೆಯಲ್ಲಿ ಮೊದಲ ಬಾರಿ ಅಂಗವಿಕಲರಿಗೆ ಉಚಿತವಾಗಿ ತ್ರಿಚಕ್ರ ವಾಹನ ತರಬೇತಿಯನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. 32 ವರ್ಷದ ಜಗದೀಶ್ ಹುಟ್ಟಿನಿಂದ ಅಂಗವೈಕಲ್ಯತೆಯನ್ನು ಹೊಂದಿರಲಿಲ್ಲ. ಆರು ವರ್ಷಗಳ ತನಕ ಎಲ್ಲ ಮಕ್ಕಳಂತೆ ಆಟವಾಡಿ ಬೆಳದವರು. ತೀಕ್ಷ್ಮಣವಾದ ಬುದ್ಧಿಯಿಂದ ಹಾಗೂ ಚರುಕು ಚಟುವಟಿಕೆಯಿಂದ ಬೆಳೆದವರು.

ಆರನೇ ವಯಸ್ಸಿನಲ್ಲಿ ಕಾಣಿಸಿಕೊಂಡ ಜ್ವರದಿಂದ ಪೋಲಿಯೋ ಪೀಡಿತರಾದರು. ತಮ್ಮ ಜೀವನದ ಸಂತೋಷ ಕಳೆದುಕೊಳ್ಳುತ್ತಿದೆ ಎನ್ನುವ ಪರಿವೇ ಇಲ್ಲದ ಮುಗ್ಧ ಬಾಲಕನಿಗೆ ಮನಸ್ಸಿನಲ್ಲಿ ತಾನು ಎಲ್ಲರಂತೆ ಒಡಾಡಲು ಹಾಗೂ ನಡೆಯಲು ಸಾಧ್ಯವಿಲ್ಲ ಎನ್ನುವ ನೂರಾರು ಪ್ರಶ್ನೆಗಳ ನಡುವೆಯೆ ತನ್ನ ಶಿಕ್ಷಣವನ್ನು ಮುಂದುವರಿಸಿದರು.

ಸಮಯ ಕಳೆದಂತೆ ಎಲ್ಲವನ್ನು ಅರಿತು ಅವರು ಬಿ.ಎ ವರೆಗೆ ಶಿಕ್ಷಣ ಪಡೆದು, ನಿರಂತವಾಗಿ ಸಾಮಾಜಿಕ ಚಟುವಟಿಕೆಯಲ್ಲಿ ತೋಡಗಿಸಿಕೊಂಡರು. ಜಿಲ್ಲೆಯಲ್ಲಿ ಹಲವಾರು ವಾಹನ ಚಾಲನಾ ತರಬೇತಿ  ಕೇಂದ್ರಗಳು (ಡೈವಿಂಗ್ ಸ್ಕೂಲ್) ಇದ್ದರೂ ಅಂಗವಿಕಲರಿಗೆ ವಾಹನ ಕಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಂಗವಿಕಲರಿಗಾಗಿ ತ್ರಿಚಕ್ರವಾಹನ ಕಲಿಸಲು ಜಗದೀಶ್ ಮುಂದೆ ಬಂದು ಅಂಗವಿಕಲ ಡ್ರೈವಿಂಗ್ ಸ್ಕೂಲ್ ಆರಂಭಿಸಿದ್ದಾರೆ. ‌

ಆನೇಕ ವರ್ಷದಿಂದ ಅಂಗವಿಕ ಲರಿಗೆ ಪರಿಚಯದ ಆಧಾರ ಮೇಲೆ ತರಬೇತಿಯನ್ನು ನೀಡಿದ್ದಾರೆ. ಆದರೆ ಇದೀಗ ಅಧಿಕೃತವಾಗಿ  ಒಂದು ವರ್ಷದಿಂದ 100ಕ್ಕೂ ಹೆಚ್ಚಿನ ಅಂಗವಿಕಲರಿಗೆ ತ್ರಿಚಕ ವಾಹನ ಚಾಲನೆಯ ತರಬೇತಿಯನ್ನು ಉಡುಪಿ, ಮಣಿಪಾಲ ಹಾಗೂ ಇತರ ಪ್ರದೇಶಗಳಲ್ಲಿ ನೀಡಿದ್ದಾರೆ. ಇವರಿಗೆ ಉಡುಪಿ ಜಿಲ್ಲಾ ಅಂಗವಿಕಲರ ಸಂಘದ ಸದಸ್ಯರು ಹಾಗೂ ಅಧ್ಯಕ್ಷರು ಸಾಥ್ ನೀಡಿದ್ದಾರೆ.

‘ ತ್ರಿಚಕ್ರ ವಾಹನದ ತರಬೇತಿಯನ್ನು ಇತರರು ನೀಡಲು ಕಷ್ಟ ಸಾಧ್ಯ.  ಹೀಗಾಗಿ ಅಂಗವಿಕಲರ ಸಂಘದ ಜತೆ ಸೇರಿಕೊಂಡು ವಾಹನ ತರಬೇತಿಯನ್ನು ಪಡೆಯಲು ಇಚ್ಛಿಸುವವರಿಗೆ  ಶುಲ್ಕ ಪಡೆಯದೆ ತರಬೇತಿಯನ್ನು ನೀಡ ಲಾಗುತ್ತಿದೆ’ ಎಂದು ಜಗದೀಶ್ ತಿಳಿಸಿದ್ದಾರೆ. ಇಗಾಗಲೇ ಬ್ರಹ್ಮಾವರ ರೂಡ್ ಸೆಟ್ ಸಂಸ್ಥೆ ಆಯೋಜಿಸಿದ್ದ ಅಂಗವಿಕಲ ತ್ರಿಚಕ್ರ ವಾಹನ ತರಬೇತಿ ಶಿಬಿರದಲ್ಲಿ 50 ಮಂದಿಗೆ ತರಬೇತಿಯನ್ನು ನೀಡಿದ್ದಾರೆ. ಜೀವನದ ಪೋಷಣೆಗಾಗಿ ಇತರ ಡೈವಿಂಗ್ ಸ್ಕೂಲ್ಗಳಲ್ಲಿ ಆನ್ ಲೈನ್ ಅರ್ಜಿಯನ್ನು ಸಲ್ಲಿಸುವ ವೃತ್ತಿಯಲ್ಲಿ ತೋಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT