ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿ ಧಾನ್ಯಗಳ ಬಳಕೆಗೆ ಸಲಹೆ

Last Updated 23 ಅಕ್ಟೋಬರ್ 2017, 9:27 IST
ಅಕ್ಷರ ಗಾತ್ರ

ಕವಿತಾಳ: ಒತ್ತಡದ ಜೀವನ ಶೈಲಿ ಮತ್ತು ಅವೈಜ್ಞಾನಿಕ ಆಹಾರ ಪದ್ಧತಿಯಿಂದ ಮನುಷ್ಯನ ಆರೋಗ್ಯ ಹದಗೆಡುತ್ತಿದೆ ಎಂದು ಮೈಸೂರಿನ ಆಹಾರ ತಜ್ಞ ಡಾ.ಖಾದರ್ ಹೇಳಿದರು. ಸಮೀಪದ ಬಲ್ಲಟಗಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ದೇಶಿ ಆಹಾರ’ ಕುರಿತ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
‘ಪಾಶ್ಚಿಮಾತ್ಯ ಆಹಾರ ಪದ್ಧತಿಗೆ ಮಾರು ಹೋಗದೆ ಸಿರಿ ಧಾನ್ಯಗಳ ಬಳಕೆ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಪಡೆಯಬಹುದು’ ಎಂದರು.

‘ರಾಸಾಯನಿಕ ಮತ್ತು ಕ್ರಿಮಿನಾಶಕಗಳ ಅತಿಯಾದ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಹಣ ಗಳಿಕೆಯನ್ನು ಮೂಲ ಗುರಿಯಾಗಿಸಿಕೊಂಡಿರುವ ರೈತರು ಹೆಚ್ಚು ರಾಸಾಯನಿಕ ಗೊಬ್ಬರ ಬಳಸಿ ಬೆಳೆ ಬೆಳೆಯುತ್ತಿದ್ದಾರೆ’ ಎಂದು ಹೇಳಿದರು.

ಇರಕಲ್‌ನ ಶಿವಶಕ್ತಿ ಪೀಠದ ಬಸವಪ್ರಸಾದ ಸ್ವಾಮೀಜಿ ಮಾತನಾಡಿ, ‘ಉತ್ತಮ ಆಹಾರ ಸೇವನೆ ಮತ್ತು ಸದ್ವಿಚಾರಗಳ ಮೂಲಕ ಆರೋಗ್ಯ ಕಾಪಾಡಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು’ ಎಂದರು.

‘ನಮ್ಮಲ್ಲಿ ಸ್ವದೇಶಿ ಕಲ್ಪನೆ ಮೂಡದ ಹೊರತು ದೇಶದ ಅಭಿವೃದ್ಧಿ ಅಸಾಧ್ಯ. ನಮ್ಮ ಪೂರ್ವಿಕರು ಬೆಳೆಯುತ್ತಿದ್ದ ತೃಣ ಧಾನ್ಯಗಳ ಬಳಕೆ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರದ ಆಯುರ್ವೇದ, ಗಿಡಮೂಲಿಕೆ ಔಷಧ ಬಳಕೆ ಮಾಡಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಹೇಳಿದರು. ಡಾ.ಶರಣಪ್ಪ ಬಲ್ಲಟಗಿ, ಶಂಕರಗೌಡ ಹರವಿ, ಚಂದ್ರಶೇಖರ ಬಲ್ಲಟಗಿ, ಮಲ್ಲಿಕಾರ್ಜುನ ಬಲ್ಲಟಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT