ಪ್ರತಿಭಟನೆಗೆ ಹಾಲಪ್ಪ ಬೆಂಬಲ

ಸೋಮವಾರ, ಮೇ 20, 2019
32 °C

ಪ್ರತಿಭಟನೆಗೆ ಹಾಲಪ್ಪ ಬೆಂಬಲ

Published:
Updated:

ಹೊಸನಗರ: ಒಮ್ಮೆ ಪರವಾನಗಿ ನೀಡಿದ ಮೇಲೆ ಮದ್ಯದ ಅಂಗಡಿ ಬಂದ್ ಮಾಡಿಸುವುದರ ವಿರುದ್ಧ ಪ್ರತಿಭಟನಾ ಹೋರಾಟದ ಜತೆಗೆ ಕಾನೂನಿನ ಹೋರಾಟ ನಡೆಸುವುದು ಅಗತ್ಯ ಆಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

ಪಟ್ಟಣದ ದ್ಯಾವರ್ಸದಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ಪರವಾನಿಗೆ ರದ್ದು ಮಾಡುವಂತೆ ಆಗ್ರಹಿಸಿ 8 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸ್ಥಳಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.

ನ್ಯಾಯಯುತ ಹಾಗೂ ಅಹಿಂಸಾ ಪ್ರತಿಭಟನೆಗೆ ತಮ್ಮ ಬೆಂಬಲ, ಸಹಕಾರ ಇದೆ. ಇದರ ಜತೆಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟಕ್ಕೆ ಬೇಕಾದ ಮಾಹಿತಿ ಹಾಗೂ ಆರ್ಥಿಕ ವ್ಯವಸ್ಥೆಯನ್ನು ತಾವು ಮಾಡುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಬಿಜೆಪಿ ಪ್ರಮುಖರಾದ ಮಂಡಾನಿ ಮೋಹನ್, ಬಸವರಾಜ, ಕೆ.ನಯನ ಕುಮಾರ ಮನೋಹರ, ಎ.ವಿ.ಮಲ್ಲಿಕಾರ್ಜುನ, ಬಾಲಚಂದ್ರ, ಸತೀಶ ವೀನಸ್‌ ಹಾಜರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry