ಆರನೇ ದಿನಕ್ಕೆ ಕಾಲಿಟ್ಟ ಧರಣಿ

ಭಾನುವಾರ, ಜೂನ್ 16, 2019
26 °C

ಆರನೇ ದಿನಕ್ಕೆ ಕಾಲಿಟ್ಟ ಧರಣಿ

Published:
Updated:

ಬಸವನಬಾಗೇವಾಡಿ: ಇಲ್ಲಿನ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಮುಂಭಾಗದ ಜಾಗೆಯನ್ನು ಬಿಜ್ಜಳ-ಮನಗೂಳಿ ರಾಜ್ಯ ಹೆದ್ದಾರಿಗೆ ಪಡೆಯು ವದನ್ನು ವಿರೋಧಿಸಿ ಬಸವೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ನೇತೖತ್ವ ದಲ್ಲಿ ಹಮ್ಮಿಕೊಂಡಿರುವ ಧರಣಿಯು ಭಾನುವಾರ ಐದನೇ ದಿನಕ್ಕೆ ಕಾಲಿಟ್ಟಿತು.

ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಗಂಗಾಧರ ಕುಂಟೋಜಿ, ಇಲ್ಲಿನ ಐತಿಹಾಸಿಕ ಬಸವೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಭಕ್ತರು ಸೇರಿದಂತೆ ಪ್ರವಾಸಿಗರು ಬರುತ್ತಾರೆ. ಅಲ್ಲದೇ ದೇವಸ್ಥಾನದ ಆವರಣ ದಲ್ಲಿ ಶಾಲಾ, ಕಾಲೇಜುಗಳ ತರಗತಿ ನಡೆಯುತ್ತದೆ. ಹಲವು ಬ್ಯಾಂಕ್‌ಗಳಿವೆ.

ನೂರಾರು ಜನರು ಈ ಪ್ರಮುಖ ರಸ್ತೆ ದಾಟಿ ಹೋಗಬೇಕಾದ ಪರಿಸ್ಥಿತಿ ಇರುವುದರಿಂದ ದೇವಸ್ಥಾನದ ಮುಂಭಾಗದಲ್ಲಿ ಹಾದು ಹೋಗುವ ಮನಗೂಳಿ–ಬಿಜ್ಜಳ ರಾಜ್ಯ ಹೆದ್ದಾರಿಗಾಗಿ ಪಟ್ಟಣದ ಹೊರ ವಲಯದಲ್ಲಿ ವರ್ತುಲ್‌ ರಸ್ತೆ ನಿರ್ಮಾಣ ಮಾಡುವ ಅಗತ್ಯತೆ ಇದೆ ಎಂದು ಹೇಳಿದರು.ರಾಜ್ಯ ಹೆದ್ದಾರಿ ಕಾಮಗಾರಿಗೆ ಬಸವೇಶ್ವರ ದೇವಸ್ಥಾನದ ಮುಂಭಾಗದ ಜಾಗೆ, ದಿ.ಮಲ್ಲಪ್ಪ ಸಿಂಹಾಸನ ಆವರಣದ ಜಾಗ ಪಡೆದುಕೊಳ್ಳುವುದು ಸರಿಯಲ್ಲ ಎಂದರು.

ಸಂಗನಗೌಡ ಚಿಕ್ಕೊಂಡ, ಪ್ರವೀಣ ಪವಾರ, ರಾಜು ಮುಳವಾಡ, ಪರಶು ರಾಮ ಅಡಗಿಮನಿ, ಸಂಗಪ್ಪ ಚೌರ, ಚನ್ನಪ್ಪ ಅವಡಗಿಮನಿ, ಪರಶುರಾಮ ಜಮಖಂಡಿ, ಬಾಬು ನಿಕ್ಕಂ, ಶಂಕ್ರೆಪ್ಪ ಹಾರಿವಾಳ, ಮುದಕಪ್ಪ ಅವಟಿ, ನಿಂಗಪ್ಪ ಕುಳಗೇರಿ, ಶಿವಪ್ಪ ಒಡೆಯರ, ಭೀಮಪ್ಪ ಗುಡ್ಡದ, ಪ್ರಶಾಂತ ಪೂಜಾರಿ, ಮಲ್ಲಿಕಾರ್ಜುನ ಕಿಣಗಿ, ಚನ್ನಪ್ಪ ಗಬ್ಬೂರ, ಚಂದು ಹಂಚಾಟೆ, ಅನಿಲ ಕುಲಕರ್ಣಿ, ಮಲ್ಲನಗೌಡ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry