ಸುದೀಪ್‌ ಪ್ರಕಾರ ಸಿನಿಮಾ ಗೆಲುವಿನ ಮಾನದಂಡ ಏನು?

ಬುಧವಾರ, ಜೂನ್ 19, 2019
27 °C

ಸುದೀಪ್‌ ಪ್ರಕಾರ ಸಿನಿಮಾ ಗೆಲುವಿನ ಮಾನದಂಡ ಏನು?

Published:
Updated:
ಸುದೀಪ್‌ ಪ್ರಕಾರ ಸಿನಿಮಾ ಗೆಲುವಿನ ಮಾನದಂಡ ಏನು?

ಬೆಂಗಳೂರು: ಒಂದು ಸಿನಿಮಾ ಯಶಸ್ವಿ ಆಗಿದೆ ಎಂದು ಗುರ್ತಿಸುವುದು ಹೇಗೆ? ಅದರ ಮಾನದಂಡಗಳೇನು? ನಟ ಸುದೀಪ್‌ ಅವರ ಪ್ರಕಾರ ಗೆಲುವಿನ ಮಾನದಂಡ ಹೀಗಿದೆ. ‘ಚಿತ್ರ ನೂರು ದಿನ ಪ್ರದರ್ಶನವಾದರೆ ಅದನ್ನು ಹಿಟ್‌ ಎಂದು ಹೇಳಲಾಗದು. ಆದರೆ ಜನರಿಗೆ ಮೆಚ್ಚುಗೆಯಾದರೆ ಅದು ನಿಜವಾದ ಯಶಸ್ಸು’.

ಸುದೀಪ್‌ ಹೀಗೆ ವ್ಯಾಖ್ಯಾನಕ್ಕಿಳಿದಿದ್ದು ’ಶಂಖನಾದ’ ಸಿನಿಮಾ ಸಿ.ಡಿ. ಬಿಡುಗಡೆ ಕಾರ್ಯಕ್ರಮದಲ್ಲಿ. ಹೊಸಬರ ಚಿತ್ರತಂಡಕ್ಕೆ ಶುಭ ಹಾರೈಸಿ ಬೆನ್ನುತಟ್ಟಲು ಆ ಕಾರ್ಯಕ್ರಮದಲ್ಲಿ ಸುದೀಪ್‌ ಹಾಜರಿದ್ದರು.

‘ಈ ತಂಡದಲ್ಲಿ ಎಲ್ಲರಲ್ಲಿಯೂ ಮುಗ್ಧತೆ ಎದ್ದು ಕಾಣುತ್ತದೆ. ಅವರಿಗೆ ಯಶಸ್ಸು ಸಿಗಲಿ’ ಎಂದು ಹಾರೈಸಿದರು.

‘ಸಿನಿಮಾ ನಾಯಕನಾಗುವುದು ನನ್ನ ಹದಿಮೂರು ವರ್ಷಗಳ ಕನಸು. ನನ್ನ ಮೊದಲ ಸಿನಿಮಾ ಸಿ.ಡಿ. ಬಿಡುಗಡೆಗೆ ಸುದೀಪ್‌ ಬಂದಿರುವುದು ನಮ್ಮ ಅದೃಷ್ಟ’ ಎಂದರು ಖುಷಿಯಿಂದ ಹೇಳಿಕೊಂಡರು ನಾಯಕ ಶಾಂತರೆಡ್ಡಿ ನಾಗಣ್ಣಗೌಡ ಪಾಟೀಲ್‌.

‘ಒಳ್ಳೆಯದು ಮಾಡುವವರಿಗೆ ಒಳ್ಳೆಯದೇ ಆಗುತ್ತದೆ, ಕೆಟ್ಟದ್ದು ಮಾಡುವವರಿಗೆ ಕೆಟ್ಟದ್ದು ಆಗುತ್ತದೆ ಎಂಬುದು ಜನಪ್ರಿಯ ನಂಬಿಕೆ. ಆದರೆ ಅದು ತುಂಬ ಸಲ ಸತ್ಯವಾಗಿರುವುದಿಲ್ಲ. ಈ ಚಿತ್ರವೂ ಅಂಥದ್ದೇ ಕಥೆ ಹೊಂದಿದೆ. ಥ್ರಿಲ್ಲರ್‌, ಸಸ್ಪೆನ್ಸ್‌ ಕಥೆ ಇದು’ ಎಂದು ಅವರು ವಿವರಿಸಿದರು.

‘ಈ ಚಿತ್ರದಲ್ಲಿ ನನ್ನ ಪಾತ್ರ ತುಂಬ ಚೆನ್ನಾಗಿದೆ. ನವರಸಗಳ ಅಭಿವ್ಯಕ್ತಿಗೂ ಅವಕಾಶ ಇರುವ ಪಾತ್ರ’ ಎಂದು ಹೇಳಿಕೊಂಡರು ನಾಯಕಿ ನಯನಾ.

‘ನಾವುಗಳು ಉತ್ತರ ಕರ್ನಾಟಕದವರು. ಸಿನಿಮಾ ಜಾಸ್ತಿ ನೋಡುತ್ತೇವೆ. ಮಾಡುವುದಿಲ್ಲ. ಈ ತಂಡವು ನಮ್ಮ ಭಾಗದಿಂದ ಬಂದವರಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ’ ಎಂದು ಹಾರೈಸಿದರು ಅತಿಥಿಗಳಾಗಿ ಬಂದಿದ್ದ ರಾಜುಗೌಡ

ವಿಜಯರೆಡ್ಡಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ವಿನುಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ನಕುಲ.ಡಿ.ದಂಡಿಕಲ್ ಛಾಯಾಗ್ರಹಣ ಚಿತ್ರಕ್ಕಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry