ಮರ್ಸಲ್‍ ವಿವಾದ: ಚಿತ್ರದ ಪರ ಪ್ರತಿಭಟನೆ, ನಟ ವಿಜಯ್ ವಿರುದ್ಧ ದೂರು ದಾಖಲು

ಗುರುವಾರ , ಜೂನ್ 27, 2019
30 °C

ಮರ್ಸಲ್‍ ವಿವಾದ: ಚಿತ್ರದ ಪರ ಪ್ರತಿಭಟನೆ, ನಟ ವಿಜಯ್ ವಿರುದ್ಧ ದೂರು ದಾಖಲು

Published:
Updated:
ಮರ್ಸಲ್‍ ವಿವಾದ: ಚಿತ್ರದ ಪರ ಪ್ರತಿಭಟನೆ, ನಟ ವಿಜಯ್ ವಿರುದ್ಧ ದೂರು ದಾಖಲು

ಚೆನ್ನೈ, ಮಧುರೈ: ವಿವಾದ ಹಾಗೂ ಟೀಕೆಗೊಳಗಾಗಿರುವ ಮರ್ಸಲ್‍ ಸಿನಿಮಾದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಪರ–ವಿರೋಧ ಪ್ರತಿಭಟನೆಗಳು ವ್ಯಕ್ತವಾಗಿವೆ.

ದೀಪಾವಳಿ ದಿನ ತೆರೆಕಂಡಿರುವ ವಿಜಯ್ ನಟನೆಯ ತಮಿಳು ಚಿತ್ರ ‘ಮರ್ಸಲ್’ನಲ್ಲಿ ಕೇಂದ್ರ ಸರ್ಕಾರದ ಜಿಎಸ್‌ಟಿ ಹಾಗೂ ನೋಟು ರದ್ದತಿಗೆ ಸಂಬಂಧಿಸಿದ ದೃಶ್ಯಗಳನ್ನು ಚಿತ್ರದಿಂದ ತೆಗೆಯಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು.

ಪ್ರತಿಭಟನೆ; ಬಂಧನ

ಇದಾದ ಬಳಿಕ, ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಮರ್ಸಲ್‌ ಚಿತ್ರದ ಪರವಾಗಿ ಚೆನ್ನೈನಲ್ಲಿ ಡೆಮಾಕ್ರಟಿಕ್‌ ಯೂತ್‌ ಫೆಡರೇಷನ್‌ ಆಫ್‌ ಇಂಡಿಯಾ(ಡಿವೈಎಫ್‌ಐ) ಪ್ರತಿಭಟನೆ ನಡೆಸಿದೆ.

ಚಿತ್ರವನ್ನು ಪ್ರೋತ್ಸಾಹಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ದೂರು ದಾಖಲು
ಮತ್ತೊಂದು ಬೆಳವಣಿಗೆಯಲ್ಲಿ ‘ಮರ್ಸಲ್‌ ಚಿತ್ರದಲ್ಲಿ ದೇವಾಲಯಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಕೆಟ್ಟದಾಗಿ ತೋರಿಸಲಾಗಿದೆ’ ಎಂದು ಮಧುರೈನಲ್ಲಿ ಮರ್ಸಲ್‌ ಚಿತ್ರದ ನಟ ವಿಜಯ್‌ ವಿರುದ್ಧ ವಕೀಲ ಮುತ್ತು ಕುಮಾರ್‌ ಎಂಬುವರು ದೂರು ದಾಖಲಿಸಿದ್ದಾರೆ.

ಇವನ್ನೂ ಓದಿ...

ಮರ್ಸಲ್‍ ವಿವಾದ: ಟೀಕೆಗೊಳಗಾಗಿರುವ ಸಿನಿಮಾ ದೃಶ್ಯ ವೈರಲ್

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry