ಬಿಜೆಪಿ ಸೇರುವುದಕ್ಕಾಗಿ ₹1 ಕೋಟಿ ಆಮಿಷ ಒಡ್ಡಲಾಗಿತ್ತು : ಪಟೇಲ್‌ ಸಮುದಾಯದ ಮುಖಂಡನ ಆರೋಪ

ಬುಧವಾರ, ಜೂನ್ 19, 2019
23 °C

ಬಿಜೆಪಿ ಸೇರುವುದಕ್ಕಾಗಿ ₹1 ಕೋಟಿ ಆಮಿಷ ಒಡ್ಡಲಾಗಿತ್ತು : ಪಟೇಲ್‌ ಸಮುದಾಯದ ಮುಖಂಡನ ಆರೋಪ

Published:
Updated:
ಬಿಜೆಪಿ ಸೇರುವುದಕ್ಕಾಗಿ ₹1 ಕೋಟಿ ಆಮಿಷ ಒಡ್ಡಲಾಗಿತ್ತು : ಪಟೇಲ್‌ ಸಮುದಾಯದ ಮುಖಂಡನ ಆರೋಪ

ಅಹಮದಾಬಾದ್‌ : ಬಿಜೆಪಿಗೆ ಸೇರುವುದಕ್ಕಾಗಿ ತಮಗೆ ₹1 ಕೋಟಿ ಆಮಿಷ ಒಡ್ಡಲಾಗಿತ್ತು ಎಂದು ಹಾರ್ದಿಕ್‌ ಪಟೇಲ್‌ ನೇತೃತ್ವದ ಪಾಟೀದಾರ್‌ ಅನಾಮತ್‌ ಆಂದೋಲನ ಸಮಿತಿಯ (ಪಿಎಎಎಸ್‌) ಮುಖಂಡ ನರೇಂದ್ರ ಪಟೇಲ್‌ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.

ನರೇಂದ್ರ ಅವರ ಆರೋಪದ ಬೆನ್ನಿಗೇ, ಪಿಎಎಎಸ್‌ನ ಇನ್ನೊಬ್ಬ ಮುಖಂಡ ಕೆಲವು ತಿಂಗಳ ಹಿಂದೆ ಬಿಜೆಪಿ ಸೇರಿದ್ದ ನಿಖಿಲ್‌ ಸಾವನಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಟೀದಾರ್‌ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ್ದ ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ. ಹಾಗಾಗಿ ಪಕ್ಷ ಬಿಡುತ್ತಿರುವುದಾಗಿ ಸಾವನಿ ಹೇಳಿದ್ದಾರೆ.

ನರೇಂದ್ರ ಪಟೇಲ್‌ ಅವರ ಬಿಜೆಪಿ ಸೇರ್ಪಡೆ ಮತ್ತು ಬಳಿಕ ಅವರು ಮಾಡಿರುವ ಆರೋಪ ಹೆಚ್ಚು ನಾಟಕೀಯವಾಗಿ ನಡೆದಿದೆ. ಗುಜರಾತ್‌ ರಾಜ್ಯ ಬಿಜೆಪಿ ಅಧ್ಯಕ್ಷ ಜೀತೂ ವಘಾನಿ ಅವರ ಸಮ್ಮುಖದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ್ದ ನರೇಂದ್ರ ಅವರು ಬಿಜೆಪಿ ಸೇರುವುದಾಗಿ ಭಾನುವಾರ ಸಂಜೆ ಘೋಷಿಸಿದ್ದರು. ಆದರೆ ಕೆಲವೇ ತಾಸುಗಳ ಬಳಿಕ ರಾತ್ರಿ 10.30ಕ್ಕೆ ಮಾಧ್ಯಮಗೋಷ್ಠಿ ನಡೆಸಿದ ಅವರು, ಬಿಜೆಪಿ ಸೇರುವುದಕ್ಕಾಗಿ ತಮಗೆ ₹1 ಕೋಟಿಯ ಆಮಿಷ ಒಡ್ಡಲಾಗಿತ್ತು. ಆದರೆ ತಮ್ಮ ಸಮುದಾಯಕ್ಕೆ ಮೋಸ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಇದೆಲ್ಲ ಕಾಂಗ್ರೆಸ್‌ ಕುಮ್ಮಕ್ಕಿನಲ್ಲಿ ನಡೆಯುತ್ತಿರುವ ನಾಟಕ ಎಂದು ಬಿಜೆಪಿ ಹೇಳಿದೆ. ‘ಆರೋಪಗಳೆಲ್ಲವೂ ಸುಳ್ಳು. ಕಾಂಗ್ರೆಸ್‌ ಒತ್ತಾಸೆಯಲ್ಲಿ ನರೇಂದ್ರ ಅವರು ನಾಟಕ ಆಡುತ್ತಿದ್ದಾರೆ. ಬಿಜೆಪಿ ಸೇರುವುದಕ್ಕೆ ಅವರಾಗಿಯೇ ಬಂದಿದ್ದರು. ತಾಸುಗಳ ಬಳಿಕ ನಿರ್ಧಾರ ಬದಲಿಸಿದರು. ಇದೆಲ್ಲವೂ ಪೂರ್ವಯೋಜಿತ ಎಂಬುದು ಇದರಿಂದಲೇ ತಿಳಿಯುತ್ತದೆ’ ಎಂದು ಗುಜರಾತ್‌ ಬಿಜೆಪಿ ವಕ್ತಾರ ಭರತ್‌ ಪಾಂಡ್ಯ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry