’ಮೋದಿ ಜೀ ನೀವು ಗುಜರಾತಿನ ಜನರನ್ನು ಕೊಂಡುಕೊಳ್ಳಲಾಗುವುದಿಲ್ಲ’: ರಾಹುಲ್ ಗಾಂಧಿ

ಮಂಗಳವಾರ, ಮೇ 21, 2019
24 °C
ನವಸರ್ಜನ್ ಜನಾದೇಶ ಮಹಾಸಮ್ಮೇಳನದಲ್ಲಿ ಭಾಗಿ

’ಮೋದಿ ಜೀ ನೀವು ಗುಜರಾತಿನ ಜನರನ್ನು ಕೊಂಡುಕೊಳ್ಳಲಾಗುವುದಿಲ್ಲ’: ರಾಹುಲ್ ಗಾಂಧಿ

Published:
Updated:
’ಮೋದಿ ಜೀ ನೀವು ಗುಜರಾತಿನ ಜನರನ್ನು ಕೊಂಡುಕೊಳ್ಳಲಾಗುವುದಿಲ್ಲ’: ರಾಹುಲ್ ಗಾಂಧಿ

ಗಾಂಧಿನಗರ: ‘ಮೋದಿ ಜೀ ನೀವು ಗುಜರಾತಿನ ಜನರನ್ನು ಕೊಂಡುಕೊಳ್ಳಲಾಗುವುದಿಲ್ಲ. ಅವರ ದನಿಯನ್ನು ಹತ್ತಿಕ್ಕಲಾಗುವುದಿಲ್ಲ. ನೀವು ಜನರ ಎದುರು ಬೇಕಾದಷ್ಟು ಹಣ ಸುರಿಯಬಹುದು. ಆದರೆ ಇದರಿಂದ ನೀವು ಜನರ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ’....

ಹೀಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಡುಗಿದವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ. ಗಾಂಧಿನಗರದಲ್ಲಿ ನಡೆಯುತ್ತಿರುವ ನವಸರ್ಜನ್ ಜನಾದೇಶ ಮಹಾಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ವೇಳೆ ಮೋದಿ ಅವರ ಮೇಲೆ ಹರಿಹಾಯ್ದಿದ್ದಾರೆ.

‘ಗುಜರಾತಿನ ಯುವಕರು ಗುಣಮಟ್ಟದ ಶಿಕ್ಷಣ ಪಡೆದಿಲ್ಲ. ಉತ್ತಮ ಉದ್ಯೋಗ ಸಿಕ್ಕಿಲ್ಲ. ಮುಖ್ಯವಾಗಿ ಯುವಕರಿಗೆ ಶಿಕ್ಷಣ ಬೇಕಾಗಿದೆ. ಆದರೆ ನೀವು ಕಳೆದ 22 ವರ್ಷಗಳ ಹಿಂದೆ ವಿಶ್ವವಿದ್ಯಾಲಯಗಳ ಜವಾಬ್ದಾರಿಯನ್ನು ಉದ್ಯಮಿಗಳಿಗೆ ವರ್ಗಾಯಿಸಿದ್ದೀರಿ. ಇದರಿಂದ ಯುವಕರಿಗೆ ವಿದ್ಯಾಭ್ಯಾಸ ಎನ್ನುವುದು ಮರಿಚಿಕೆಯಾದಂತಾಯಿತು. ಶಿಕ್ಷಣದ ವೆಚ್ಚ ದುಬಾರಿಯಾದ ಕಾರಣ ಅದರ ವೆಚ್ಚವನ್ನು ಭರಿಸಲಾಗದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ದೂರವೇ ಉಳಿದಿದ್ದಾರೆ’ ಎಂದು ಮೋದಿ ಅವರ ಮೇಲೆ ಕಿಡಿಕಾರಿದ್ದಾರೆ. 

ಇದೇ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮಗ ಜಯ್ ಷಾ ಅವರ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಮಾತನಾಡಿದ ರಾಹುಲ್, ’ಯಾಕೆ ನರೇಂದ್ರ ಮೋದಿ ಅವರು ಈ ವಿಚಾರದ ಬಗ್ಗೆ ಮೌನವಹಿಸಿದರು? ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣಗಳನ್ನು ಮಾಡಿದ್ದೀರಿ. ಈ ವಿಚಾರದ ಬಗ್ಗೆ ನೀವು ಒಂದು ವಾಕ್ಯವಾದರೂ ಮಾತನಾಡಿದ್ದೀರಾ? ಎಂದು ಪ್ರಶ್ನಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry