ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ಕಾಲದ ಬದುಕು ಬಿಂಬಿಸುವ ಕಿರುಚಿತ್ರಗಳು

Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಯುದ್ಧ ಎಂದ ಕೂಡಲೇ ಕಣ್ಣೆದುರು ಬರುವುದು ಸಾವು, ಸೈನಿಕರು, ದ್ವೇಷ, ಉನ್ಮಾದ ಇತ್ಯಾದಿ ಇತ್ಯಾದಿ. ಆದರೆ, ಇದರಿಂದಾಚೆಗೆ ಭಯಾನಕ ಎನಿಸುವಂತಹ ವ್ಯಥೆ, ಕತೆಗಳಿರುತ್ತವೆ. ಸಾಮಾನ್ಯ ಜನರು ಅನುಭವಿಸುವ ಮತ್ತು ಸಮಾಜದ ಬೇರೆ ಮಜಲುಗಳ ಮೇಲಾಗುವ ದುಷ್ಪರಿಣಾಮ ಚಿಂತಿಸುವಂತಹದ್ದು.

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಸಾಮಾನ್ಯ ಜನರು ಅನುಭವಿಸಿದ ಕಾರ್ಪಣ್ಯಗಳನ್ನು ಬ್ರಿಟಿಷ್‌ ಸಿನಿಮಾ ತಯಾರಕರು ಗುರುತಿಸಿ ಕಿರುಚಿತ್ರಗಳ ಮೂಲಕ ಹಿಡಿದಿಟ್ಟಿದ್ದಾರೆ. ಅಂತಹ ಕೆಲವು ಕಿರುಚಿತ್ರಗಳನ್ನು ಇಂದು (ಅ.24) ಸೋಷಿಯಲ್‌ ಸಂಸ್ಥೆ ಪ್ರದರ್ಶಿಸಲಿದೆ.

ಯುದ್ಧಕಾಲದ ಪತ್ರಿಕೋದ್ಯಮವನ್ನು ‘ಮಾರ್ನಿಂಗ್‌ ಪೇಪರ್‌’ ಕಟ್ಟಿಕೊಟ್ಟರೆ, ಯುದ್ಧ ನಡೆಯುತ್ತಿರುವಾಗ ಲಂಡನ್‌ ನಗರದ ಸ್ಥಿತಿಗತಿ ಬಗ್ಗೆ ‘ಲಂಡನ್‌ 1942’ ಮಾಹಿತಿ ನೀಡುತ್ತದೆ. ಇನ್ನು ’ಮ್ಯಾನ್‌ ಆನ್‌ ದಿ ಬೀಟ್‌’ ಹಾಸ್ಯದ ಲೇಪನದಲ್ಲಿ ಪೊಲೀಸ್ ವ್ಯವಸ್ಥೆ ಕುರಿತ ಗಂಭೀರ ಸಂಗತಿಗಳನ್ನು ದಾಟಿಸುತ್ತದೆ.

ಆರನೇ ಕಿಂಗ್‌ ಜಾರ್ಜ್‌ನ ಸಮಾಜಮುಖಿ ಚಟುವಟಿಕೆ, ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಎಲಿಜಬೆತ್‌ ರಾಣಿಯ ಬದುಕು ಹಾಗೂ ರಾಜಕುಟುಂಬದ ಜೀವನ ಶೈಲಿಯನ್ನು ‘ರಾಯಲ್‌ ರೋಡ್‌’ ಸಿನಿಮಾ ಕಟ್ಟಿಕೊಡುತ್ತದೆ. ಬ್ರಿಟನ್‌ನ ಹತ್ತಿ ಉದ್ಯಮದ ಬಗ್ಗೆ ‘ಕ್ವೀನ್‌ ಕಾಟನ್‌’ ಮಾಹಿತಿ ನೀಡುತ್ತದೆ. ‘ದಿ ಪೀಪಲ್ಸ್‌ ಲ್ಯಾಂಡ್‌’ ಇವುಗಳು ಇಲ್ಲಿ ಪ್ರದರ್ಶಿಸಲಾಗುತ್ತಿರುವ ಕಿರುಚಿತ್ರಗಳು.

ಸ್ಥಳ- ಚರ್ಚ್‌ ಸ್ಟ್ರೀಟ್‌ ಸೋಷಿಯಲ್‌, 46/1, ಕೋಬಾಲ್ಟ್‌ ಕಟ್ಟಡ, ಚರ್ಚ್‌ಸ್ಟ್ರೀಟ್‌ ರಸ್ತೆ. ಮಂಗಳವಾರ ಸಂಜೆ 7. ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT