ಬಾಲಿವುಡ್‌ಗೆ ಬರುವರೇ ಸಂಜಯ್‌ ಪುತ್ರಿ

ಮಂಗಳವಾರ, ಜೂನ್ 18, 2019
26 °C

ಬಾಲಿವುಡ್‌ಗೆ ಬರುವರೇ ಸಂಜಯ್‌ ಪುತ್ರಿ

Published:
Updated:
ಬಾಲಿವುಡ್‌ಗೆ ಬರುವರೇ ಸಂಜಯ್‌ ಪುತ್ರಿ

ಬಾಲಿವುಡ್‌ನಲ್ಲಿ ಸ್ಟಾರ್‌ ನಟ, ನಟಿಯರ ಮಕ್ಕಳು ಒಬ್ಬೊಬ್ಬರಂತೆ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗೆ ಸೈಫ್‌ ಆಲಿ ಖಾನ್‌ ಮಗಳು ಸಾರಾ ಆಲಿ ಖಾನ್‌ ‘ಕೇದಾರ್‌ನಾಥ್‌’ ಚಿತ್ರದ ಮೂಲಕ ಬಾಲಿವುಡ್‌ಗೆ ಅಂಗಳಕ್ಕೆ ಬಂದಿದ್ದರೆ, ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್‌ ಸದ್ಯದಲ್ಲೇ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇವರ ಸಾಲಿಗೆ ಈಗ ಸಂಜಯ್‌ದತ್‌ ಮಗಳು ತ್ರಿಶಾಲಾ ದತ್‌ ಸೇರುತ್ತಾರೆಯೇ ಎಂಬ ಕುತೂಹಲ ಬಾಲಿವುಡ್‌ನಲ್ಲಿ ಮೂಡಿದೆ. ತ್ರಿಶಾಲಾ ದತ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿರುವ ಫೋಟೊಗಳನ್ನು ನೋಡಿದರೆ ಅವರು ಬಾಲಿವುಡ್‌ಗೆ ಪ್ರವೇಶಿಸುವ ದಿನಗಳು ದೂರವಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಸದ್ಯ ನ್ಯೂಯಾರ್ಕ್‌ನಲ್ಲಿ  ಮನಶಾಸ್ತ್ರ ಓದುತ್ತಿರುವ ತ್ರಿಶಾಲಾ ಅವರು ಅಂದಗಾತಿ. ಫಿಟ್‌ನೆಸ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಇವರು, ಜಿಮ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಾರಂತೆ.

ಇತ್ತೀಚೆಗೆ ತಮ್ಮ ಚಿತ್ರ ‘ ಭೂಮಿ’ಯನ್ನು ಮಗಳಿಗಾಗಿ ಅರ್ಪಿಸಿದ್ದರು ಸಂಜಯ್‌ ದತ್‌. ಈ ಚಿತ್ರದ ಪೋಸ್ಟರ್‌ ಅನ್ನು ತ್ರಿಶಾಲಾ ಹಂಚಿಕೊಂಡಿದ್ದರು. ಇದೇ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಸಂಜಯ್‌  ‘ತಮ್ಮ ಮಗಳು ಸಿನಿಮಾ ಕ್ಷೇತ್ರಕ್ಕೆ ಬರುವುದು ತನಗೆ ಇಷ್ಟವಿಲ್ಲ. ಸಿನಿಮಾ ಕ್ಷೇತ್ರ ಸುರಕ್ಷಿತ ಕೆಲಸವಲ್ಲ, ಆಕೆಗೆ ಮನಶಾಸ್ತ್ರದಲ್ಲೇ ಉತ್ತಮ ಭವಿಷ್ಯವಿದೆ’ ಎಂದು ಹೇಳಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry