ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಥಿರತೆ ಕಾಪಾಡಿಕೊಳ್ಳುವುದು ಮುಖ್ಯ’

ಏಷ್ಯಾಕಪ್ ಗೆದ್ದ ಭಾರತ ತಂಡಕ್ಕೆ ಕೋಚ್ ಮ್ಯಾರಿಜ್‌ ಕಿವಿಮಾತು
Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತ ತಂಡ ಏಷ್ಯಾಕಪ್‌ನಲ್ಲಿ ಉತ್ತಮ ಆಟ ಆಡಿದೆ. ಆದರೆ ಸ್ಥಿರತೆ ಕಾಪಾಡಿಕೊಂಡು ಮುಂದೆ ಸಾಗುವ ಅಗತ್ಯ ಇದೆ’ ಎಂದು ತಂಡದ ಕೋಚ್ ಶೊರ್ಡ್‌ ಮ್ಯಾರಿಜ್ ಕಿವಿಮಾತು ಹೇಳಿದ್ದಾರೆ.

‘ನಾನು ಕೋಚ್ ಆದ ಬಳಿಕ ನಡೆದ ಮೊದಲ ಟೂರ್ನಿಯಲ್ಲಿಯೇ ಭಾರತ ಯಶಸ್ಸು ಕಂಡಿದೆ. ಇದರಿಂದ ಅತೀವ ಖುಷಿಯಾಗಿದೆ. ಹಾಕಿ ಅಭಿಮಾನಿಗಳಿಗೆ ಇದರಿಂದ ಸಂತೋಷವಾಗಿದೆ. ಆದರೆ ತಂಡ ಈಗಲೂ ಸ್ಥಿರವಾಗಿ ಆಡುತ್ತಿಲ್ಲ ಎಂಬುದು ನನ್ನ ಅನಿಸಿಕೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚು ಗಮನಹರಿಸುವ ಯೋಜನೆ ಇದೆ’ ಎಂದು ಮ್ಯಾರಿಜ್ ಅಭಿಪ್ರಾಯಪಟ್ಟಿದ್ದಾರೆ.

‘ಫೈನಲ್‌ನಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ ಆಡಿದ ರೀತಿ ನನಗೆ ತೃಪ್ತಿ ತಂದಿಲ್ಲ. ಸಾಕಷ್ಟು ಗೋಲು ಗಳಿಸುವ ಅವಕಾಶಗಳನ್ನು ನಮ್ಮ ತಂಡದವರು ಕೈಚೆಲ್ಲಿದರು. ಅಂತಿಮ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರರ ಸಾಮರ್ಥ್ಯ ತಗ್ಗಿತು. ಇದರಿಂದಾಗಿ ಮಲೇಷ್ಯಾ ತಂಡ ಗೋಲು ಗಳಿಸಿ ಜಯದ ಅಂತರ ತಗ್ಗಿಸಿತು’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಫೀಲ್ಡ್ ಗೋಲು ದಾಖಲಿಸಿದ ರೀತಿ, ವೇಗವಾದ ಪಾಸ್‌ಗಳು ಗಮನಸೆಳೆದವು. ಮನ್‌ಪ್ರೀತ್ ಸಿಂಗ್‌ ನಾಯಕತ್ವ ನೋಡಿ ಸಂತೋಷವಾಯಿತು. ಕೊನೆಯ ಏಳು ನಿಮಿಷಗಳಲ್ಲಿ ತಂಡ ರಕ್ಷಣಾತ್ಮಕವಾಗಿ ಆಡಿತು. ಇಲ್ಲದಿದ್ದರೆ ಮಲೇಷ್ಯಾ ಗೋಲು ದಾಖಲಿಸುವ ಸಾಧ್ಯತೆ ಇತ್ತು. ಇದಕ್ಕೆ ಮನ್‌ಪ್ರೀತ್ ಆಟದ ಶೈಲಿ ಹಾಗೂ ನಾಯಕತ್ವ ಗುಣ ಕಾರಣವಾಯಿತು’ ಎಂದು ಅವರು ಹೊಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT