ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪತ್ತೆಯಾಗಿದ್ದ ಭಾರತ ಮೂಲದ ಬಾಲಕಿ ಶೆರಿನ್‌ ಶವ ಪತ್ತೆ?

Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹ್ಯೂಸ್ಟನ್ : ರಸ್ತೆ ಪಕ್ಕದ ಸುರಂಗದಲ್ಲಿ ಮಗುವಿನ ಶವವೊಂದು ಪತ್ತೆ ಆಗಿದ್ದು, ಇದು ಎರಡು ವಾರಗಳ ಹಿಂದೆ ನಾಪತ್ತೆಯಾಗಿದ್ದ ಭಾರತ ಮೂಲದ ಬಾಲಕಿ ಶೆರಿನ್ ಮ್ಯಾಥ್ಯೂಸ್‌ (3) ಇರಬಹುದು ಎಂದು ರಿಚರ್ಡ್‌ಸನ್ ಪೊಲೀಸರು ಶಂಕಿಸಿದ್ದಾರೆ.

ಶೆರಿನ್‌ನ ಸಾಕುಪೋಷಕರಾದ ಭಾರತ ಮೂಲದ ವೆಸ್ಲೆ ಮ್ಯಾಥ್ಯೂಸ್ ಹಾಗೂ ಸಿನಿ ಮ್ಯಾಥ್ಯೂಸ್ ಮನೆಯಿಂದ ಅರ್ಧ ಮೈಲಿ ದೂರದಲ್ಲಿಯೇ ಈ
ಶವ ಪತ್ತೆಯಾಗಿದೆ. ಈ ಕುರಿತು ಅವರಿಗೆ ಮಾಹಿತಿ ನೀಡಲಾಗಿದೆ. ವೈದ್ಯಕೀಯ ಪರೀಕ್ಷಕರು ಮಗುವಿನ ಶವ
ಪರೀಕ್ಷಿಸಿ ಗುರುತು ಹಾಗೂ ಸಾವಿಗೆ ಕಾರಣ ಪತ್ತೆ ಮಾಡಬೇಕಿದೆ ಎಂದು ಪೊಲೀಸ್ ವಕ್ತಾರ ಸರ್ಜಂಟ್ ಕೆವಿನ್ ಪರ್ಲಿಚ್ ತಿಳಿಸಿದ್ದಾರೆ.

ಹಾಲು ಕುಡಿಯುತ್ತಿಲ್ಲ ಎಂಬ ಕಾರಣಕ್ಕಾಗಿ  ಶೆರಿನ್‌ ಸಾಕುತಂದೆ ಆಕೆಯನ್ನು ಅಕ್ಟೋಬರ್ 7ರಮಧ್ಯರಾತ್ರಿ 3 ಗಂಟೆ ವೇಳೆಗೆ ಮನೆಯಿಂದ ಹೊರಹಾಕಿದ್ದ.

15 ನಿಮಿಷಗಳ ನಂತರ ಮನೆಯಿಂದ ಹೊರಬಂದು ನೋಡಿದಾಗ ಶೆರಿನ್ ಅಲ್ಲಿರಲಿಲ್ಲ. ಬೆಳಗಾದ ನಂತರ ಆಕೆಯನ್ನು ಹುಡುಕಬಹುದು ಎಂದು ಸುಮ್ಮನಾದೆ. ಮನೆಯ ಸುತ್ತಮುತ್ತ ಕಾಡುನಾಯಿಗಳು ಇರುತ್ತವೆ ಎನ್ನುವ ವಿಷಯ ನನಗೆ ತಿಳಿದಿತ್ತು ಎಂದು ಸಾಕುತಂದೆ ವೆಸ್ಲೆ ಪೊಲೀಸರ ಬಳಿ ಹೇಳಿಕೆ
ನೀಡಿದ್ದ.

ವೆಸ್ಲೆ ಹಾಗೂ ಸಿನಿ ಕೇರಳದವರಾಗಿದ್ದಾರೆ. ಎರಡು ವರ್ಷಗಳ ಹಿಂದೆ ಇವರು ಬಿಹಾರದಅನಾಥಾಶ್ರಮದಿಂದ ಶೆರಿನ್‌ಳನ್ನು ದತ್ತು ಪಡೆದಿದ್ದರು ಎನ್ನಲಾಗಿದೆ.

ಬೆಳವಣಿಗೆ ಹಾಗೂ ಸಂವಹನದ ಸಮಸ್ಯೆ ಹೊಂದಿರುವ ಶೆರಿನ್, ನಾಪತ್ತೆಯಾದ ಐದು ತಾಸುಗಳ ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT