ರಷ್ಯಾ: ರೇಡಿಯೊ ನಿರೂಪಕಿಯ ಮೇಲೆ ಹಲ್ಲೆ

ಗುರುವಾರ , ಜೂನ್ 20, 2019
26 °C

ರಷ್ಯಾ: ರೇಡಿಯೊ ನಿರೂಪಕಿಯ ಮೇಲೆ ಹಲ್ಲೆ

Published:
Updated:

ಮಾಸ್ಕೊ: ರಷ್ಯಾದ ರೇಡಿಯೊ ಸ್ಟೇಷನ್‌ ಕಚೇರಿಯಲ್ಲಿ ನಿರೂಪಕಿಯ ಕುತ್ತಿಗೆ ಭಾಗಕ್ಕೆ ಇರಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಖ್ಯ ಸಂಪಾದಕರು ತಿಳಿಸಿದ್ದಾರೆ.

ಕಚೇರಿಯೊಳಗೆ ನುಗ್ಗಿದ ವ್ಯಕ್ತಿಯೊಬ್ಬ ಸ್ಪ್ರೇ ಬಾಟಲ್‌ನಿಂದ ಭದ್ರತಾ ಸಿಬ್ಬಂದಿ ಕಣ್ಣಿಗೆ ಎರಚಿ ಈ ಕೃತ್ಯ ನಡೆಸಿದ್ದಾನೆ ಎಂದು ಮುಖ್ಯ ಸಂಪಾದಕ ಅಲೆಕ್ಸಿ ವೆನೆಡಿಕ್ಟೋವ್‌ ತಿಳಿಸಿದ್ದಾರೆ.

ಕಚೇರಿಯೊಳಗೆ ನುಗ್ಗಿದ ಆತ ನಿರೂಪಕಿ ತಾಟಿಯಾನ ಫೆಲ್ಗೆಂಗ್ವೆರ್ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ನಂತರ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು ಎಂದರು. ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry