ಸೋಮವಾರ, ಸೆಪ್ಟೆಂಬರ್ 16, 2019
26 °C
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ

ದೋಷಾರೋಪ ನಿರಾಕರಿಸಿದ ಆರೋಪಿಗಳು

Published:
Updated:

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳು ತಮ್ಮ ಮೇಲಿನ ದೋಷಾರೋಪವನ್ನು ನಿರಾಕರಿಸಿದ್ದು, ಪ್ರಕರಣದ ವಿಚಾರಣೆಯ ಆರಂಭದ ದಿನಾಂಕವನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ನ. 28ರಂದು ನಿಗದಿಪಡಿಸಲಿದೆ.

ಕೊಲೆ ಪ್ರಕರಣದ ಆರೋಪಿಗಳಾದ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ, ಮಗ ನವನೀತ್ ಶೆಟ್ಟಿ, ನಿರಂಜನ್ ಭಟ್‌ ಹಾಗೂ ಸಾಕ್ಷ್ಯ ನಾಶ ಪ್ರಕರಣದ ಆರೋಪಿಗಳಾದ ಶ್ರೀನಿವಾಸ ಭಟ್ ಮತ್ತು ರಾಘವೇಂದ್ರ ಅವರನ್ನು ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಅವರ ಎದುರು ಸೋಮವಾರ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಅವರ ಮೇಲಿನ ಆರೋಪಗಳನ್ನು ನಿಗದಿಪಡಿಸಿದಾಗ, ಆರೋಪಿಗಳು ಅದನ್ನು ನಿರಾಕರಿಸಿದರು.

ಪೊಲೀಸ್ ವ್ಯಾನ್‌ ಬಳಕೆ:

ಆರೋಪಿಗಳನ್ನು ಕಳೆದ ಬಾರಿ ಖಾಸಗಿ ವಾಹನದಲ್ಲಿ ಕರೆ ತಂದಿದ್ದರಿಂದ ಮೂರು ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಎಸ್ಪಿ ಡಾ. ಸಂಜೀವ್ ಎಂ. ಪಾಟೀಲ್ ಅಮಾನತು ಮಾಡಿದ್ದರು. ಈ ಬಾರಿ ಅವರನ್ನು ಪೊಲೀಸ್ ವ್ಯಾನ್‌ನಲ್ಲಿಯೇ ಕರೆತರಲಾಯಿತು.

Post Comments (+)