ಪೇಮೆಂಟ್ಸ್‌ ಬ್ಯಾಂಕ್‌ಗೆ ಸಿಇಒ ನೇಮಕ

ಸೋಮವಾರ, ಜೂನ್ 17, 2019
22 °C

ಪೇಮೆಂಟ್ಸ್‌ ಬ್ಯಾಂಕ್‌ಗೆ ಸಿಇಒ ನೇಮಕ

Published:
Updated:

ನವದೆಹಲಿ: ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ಗೆ (ಐಪಿಪಿಬಿ) ಸುರೇಶ್  ಸೇಠಿ ಅವರು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ.

ವೊಡಾಫೋನ್‌ ಎಂ–ಪೇಸಾದ ಮಾಜಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೇಠಿ ಅವರು, ಈ ವರ್ಷದ ಜನವರಿಯಿಂದ ಈ ಹುದ್ದೆಯನ್ನು ಹಂಗಾಮಿಯಾಗಿ ನಿರ್ವಹಿಸುತ್ತಿದ್ದ ಎ.ಪಿ ಸಿಂಗ್‌ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬ್ಯಾಂಕ್‌ ಮಂಡಳಿಯು ಈ ನೇಮಕ ಮಾಡಿದೆ. ಸೇಠಿ ಅವರು ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವಾ ವಲಯದಲ್ಲಿ 27 ವರ್ಷಗಳ ಅನುಭವ ಹೊಂದಿದ್ದಾರೆ.

ದೇಶದಾದ್ಯಂತ 650 ಪೇಮೆಂಟ್ಸ್‌ ಬ್ಯಾಂಕ್‌ಗಳನ್ನು ಆರಂಭಿಸಲು ‘ಐಪಿಪಿಬಿ’ ಉದ್ದೇಶಿಸಿದೆ. ಮುಂದಿನ ವರ್ಷಾಂತ್ಯದ ಹೊತ್ತಿಗೆ ಈ ಬ್ಯಾಂಕ್‌ಗಳು ಅಸ್ತಿತ್ವಕ್ಕೆ ಬರಲಿವೆ. ‘ಐಪಿಪಿಬಿ’ಯಲ್ಲಿ ಸರ್ಕಾರ ಶೇ 100ರಷ್ಟು ಪಾಲು ಬಂಡವಾಳ ಹೊಂದಿದೆ.

ಪೇಮೆಂಟ್ಸ್‌ ಬ್ಯಾಂಕ್‌ಗಳಲ್ಲಿ ಗ್ರಾಹಕರು  ₹ 1 ಲಕ್ಷದವರೆಗೆ ಠೇವಣಿ ಇರಿಸಬಹುದು. ‘ಐಪಿಪಿಬಿ’ಯು ₹ 25 ಸಾವಿರವರೆಗಿನ ಠೇವಣಿಗೆ ಶೇ 4.5, ₹ 25 ರಿಂದ ₹ 50 ಸಾವಿರಕ್ಕೆ ಶೇ 5  ಮತ್ತು ₹ 50 ಸಾವಿರದಿಂದ ₹ 1 ಲಕ್ಷದವರೆಗಿನ ಠೇವಣಿಗೆ ಶೇ 5.5ರಷ್ಟು ಬಡ್ಡಿ ಪಾವತಿಸಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry