ಸೋಮವಾರ, ಸೆಪ್ಟೆಂಬರ್ 16, 2019
22 °C

ಕಾಲೇಜುಗಳ ಸಂಯೋಜನೆಗೆ ಶೀಘ್ರ ಅರ್ಜಿ ಆಹ್ವಾನ

Published:
Updated:

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು 2018–19ನೇ ಸಾಲಿನ ಕಾಲೇಜುಗಳ ಸಂಯೋಜನೆಗೆ ಶೀಘ್ರದಲ್ಲಿ ಅರ್ಜಿ ಆಹ್ವಾನಿಸಲಿದೆ ಎಂದು ಕುಲಪತಿ ಪ್ರೊ. ಎಸ್. ಜಾಫೆಟ್‌ ತಿಳಿಸಿದ್ದಾರೆ. ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಲೇಔಟ್‌, ಜಯನಗರ ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಲೇಜುಗಳು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡಲಿವೆ ಎಂದು ಪ್ರಕಟಣೆ ತಿಳಿಸಿದೆ.

ವೃತ್ತಿ ತರಬೇತಿ ಕೋರ್ಸ್‌

ಉನ್ನತಿ ಸಂಸ್ಥೆಯು ವೃತ್ತಿ ತರಬೇತಿ ಕೋರ್ಸ್‌ ಆರಂಭಿಸಲಿದೆ. ಸಂದರ್ಶನ ಕೌಶಲ, ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್ ತರಬೇತಿಯ 50 ದಿನದ ಕೋರ್ಸ್‌ ಇದಾಗಿದೆ. 18 ವರ್ಷ ದಾಟಿದವರು ತರಬೇತಿಯಲ್ಲಿ ಭಾಗವಹಿಸಬಹುದು. ತರಬೇತಿಯ ನಂತರ ಉದ್ಯೋಗ ನೀಡಲಾಗುವುದು. ಆಸಕ್ತರು ಅಕ್ಟೋಬರ್ 28ರಿಂದ ಪ್ರವೇಶ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ: ಉನ್ನತಿ ಸೆಂಟರ್, ನಂ.1, ದೇವಸ್ಥಾನದ ರಸ್ತೆ, ಎನ್.ಜಿ.ಇ.ಎಫ್ ಲೇಔಟ್, ಸದಾನಂದನಗರ, ಬೆಂಗಳೂರು - 560038. ಸಂಪರ್ಕ:080 25384642

ನ.11ಕ್ಕೆ ಕರಾಟೆ ಟೂರ್ನಿ

ಝೆನ್‌ ಸ್ಪೋರ್ಟ್ಸ್‌ ಆ್ಯಂಡ್‌ ಫಿಟ್‌ನೆಸ್‌ ಕ್ಲಬ್‌ ನ.11 ಮತ್ತು 12ರಂದು ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಕರಾಟೆ ಟೂರ್ನಮೆಂಟ್‌ ಆಯೋಜಿಸಿದೆ. ಇದರಲ್ಲಿ ವೈಯಕ್ತಿಕ ಅಥವಾ ತಂಡ ವಿಭಾಗದಲ್ಲಿ ಭಾಗವಹಿಸಬಹುದು. ವಿಜೇತರಿಗೆ ಕನಿಷ್ಠ ₹ 5 ಸಾವಿರದಿಂದ ಗರಿಷ್ಠ ₹ 40 ಸಾವಿರದ ವರೆಗೆ ನಗದು ಬಹುಮಾನ ನೀಡಲಾಗುತ್ತದೆ. ಇದಕ್ಕೆ ಪ್ರವೇಶ ಶುಲ್ಕವಿದೆ ಎಂದು ಕ್ಲಬ್‌ ಪ್ರಕಟಣೆಯಲ್ಲಿ ತಿಳಿಸಿದೆ.  ಸಂಪರ್ಕ: 9945677726

Post Comments (+)