ಭಾನುವಾರ, ಸೆಪ್ಟೆಂಬರ್ 22, 2019
22 °C

ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರ ಸಾವು

Published:
Updated:

ಲೋಕಾಪುರ (ಬಾಗಲಕೋಟೆ ಜಿಲ್ಲೆ): ಸಮೀಪದ ಪೆಟ್ಲೂರ ತಾಂಡಾದ ಇಬ್ಬರು ಬಾಲಕರು, ಕೃಷಿ ಹೊಂಡದಲ್ಲಿ ಬಿದ್ದು ಸೋಮವಾರ ಮೃತಪಟ್ಟಿದ್ದಾರೆ.

ಸಂದೀಪ ನಿಂಗಪ್ಪ ಲಮಾಣಿ (14), ಮಂಜುನಾಥ ಬಾಬು ಲಮಾಣಿ (15) ಮೃತಪಟ್ಟ ಬಾಲಕರು.

ನೀರು ತರಲೆಂದು ಹೋಗಿದ್ದ ಸಂದೀಪ, ಕಾಲುಜಾರಿ ಕೃಷಿಹೊಂಡದಲ್ಲಿ ಬಿದ್ದಿದ್ದಾನೆ. ಆತನ ರಕ್ಷಣೆಗೆ ಧಾವಿಸಿ ಮಂಜುನಾಥ ಕೂಡ ಹೊಂಡಕ್ಕೆ ಇಳಿದಿದ್ದಾನೆ. ಆದರೆ ಮೇಲಕ್ಕೆ ಬರಲಾಗದೇ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Post Comments (+)