ನವೆಂಬರ್‌ 5ಕ್ಕೆ ಹಾಸ್ಯಮೇಳ

ಭಾನುವಾರ, ಮೇ 26, 2019
31 °C

ನವೆಂಬರ್‌ 5ಕ್ಕೆ ಹಾಸ್ಯಮೇಳ

Published:
Updated:

ಬೆಂಗಳೂರು: ಅಂತರಂಗ ಹವ್ಯಾಸಿ ರಂಗತಂಡವು ನ.5ರಂದು ಜಯನಗರ 4ನೇ ಬ್ಲಾಕ್‌ನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ 17ನೇ ಆವೃತ್ತಿಯ ಹಾಸ್ಯಮೇಳ ಆಯೋಜಿಸಿದೆ.

ಬೆಳಿಗ್ಗೆ 10 ರಿಂದ ಸಂಜೆ 7ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಗುರುರಾಜ ಕರ್ಜಗಿ, ಹಿರೇಮಗಳೂರು ಕಣ್ಣನ್‌, ಪ್ರೊ.ಕೃಷ್ಣೇಗೌಡ, ರಿಚರ್ಡ್‌ ಲೂಯಿಸ್‌, ಎಂ.ಎಸ್.ನರಸಿಂಹಮೂರ್ತಿ, ಷಡಕ್ಷರಿ, ವೈ.ವಿ.ಗುಂಡೂರಾವ್‌, ಅಚ್ಯುತರಾವ್‌ ಪದಕಿ, ಪಾರ್ವತಿಸುತ, ಎನ್‌.ರಾಮನಾಥ್‌, ಎಚ್‌.ವಿ.ನಟರಾಜ್‌ ಅವರು ಹಾಸ್ಯದ ಹೊನಲು ಹರಿಸಲಿದ್ದಾರೆ.

ರಾಧಾಕೃಷ್ಣ ಉರಾಳ ಅವರು ಯಕ್ಷಗಾನದ ಹಾಸ್ಯಪ್ರಸಂಗ ಪ್ರಸ್ತುತಪಡಿಸಿದರೆ, ರಾಘವೇಂದ್ರ ಹೆಗಡೆ ಮರಳಿನಲ್ಲಿ ಚಿತ್ತಾರಗಳನ್ನು ಬಿಡಿಸಲಿದ್ದಾರೆ.

ನ.20ರಿಂದ ನಾಟಕೋತ್ಸವ: ಅಂತರಂಗ ತಂಡವು ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ನ.20, 21 ಮತ್ತು 22 ರಂದು ಮಲ್ಲೇಶ್ವರದ ಸೇವಾ ಸದನದಲ್ಲಿ ನಾಟಕೋತ್ಸವ ಆಯೋಜಿಸಿದೆ. ಖ್ಯಾತ ತಂಡಗಳು ನಾಟಕಗಳನ್ನು ಪ್ರದರ್ಶನ ಮಾಡಲಿವೆ ಎಂದು ರಂಗತಂಡವು ಪ್ರಕಟಣೆಯಲ್ಲಿ ತಿಳಿಸಿದೆ. ಸಂಪರ್ಕ: 9945622450

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry