ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೆನ್ನಮ್ಮನ ಧೈರ್ಯ ಮಹಿಳೆಯರಿಗೆ ಮಾದರಿ’

Last Updated 24 ಅಕ್ಟೋಬರ್ 2017, 5:34 IST
ಅಕ್ಷರ ಗಾತ್ರ

ಬಳ್ಳಾರಿ: ‘ಕಿತ್ತೂರು ಎಂಬ ಪುಟ್ಟರಾಜ್ಯದ ಸ್ವಾತಂತ್ರ್ಯ ರಕ್ಷಣೆಯ ಸಲುವಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಅಮರಳಾದ ಚೆನ್ನಮ್ಮ ಎಲ್ಲ ಮಹಿಳೆಯರಿಗೂ ಮಾದರಿ’ ಎಂದು ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜೋಳದರಾಶಿ ದೊಡ್ಡನಗೌಡ ಮಂದಿರದಲ್ಲಿ ಸೋಮವಾರ ಚೆನ್ನಮ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಉತ್ತರ ಭಾರತದಲ್ಲಿ ಝಾನ್ಸಿ ಲಕ್ಷ್ಮೀಬಾಯಿಯಂತೆ, ದಕ್ಷಿಣ ಭಾರತದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೀರ ಮಹಿಳೆಯಾಗಿ ಗಮನ ಸೆಳೆದಿದ್ದಾರೆ’ ಎಂದರು.

ಮೇಯರ್‌ ಜಿ. ವೆಂಕಟರಮಣ, ಪಾಲಿಕೆ ಸದಸ್ಯ ಬಿ.ಬಸವರಾಜ ಮಾತನಾಡಿದರು. ಕೆ.ಬಿ. ಸಿದ್ದಲಿಂಗಪ್ಪ ವಿಶೇಷ ಉಪನ್ಯಾಸನ ನೀಡಿದರು. ಉಪಮೇಯರ್‌ ಜಿ.ಉಮಾದೇವಿ, ಪಾಲಿಕೆ ಸದ್ಯಸರಾದ ಶಾಷವಲಿ , ಕನ್ನಡ –ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಉಪಸ್ಥಿತರಿದ್ದರು.ಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT