ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಗಚಹಳ್ಳಿ: ಕನಕಭವನ ಉದ್ಘಾಟನೆ

Last Updated 24 ಅಕ್ಟೋಬರ್ 2017, 5:50 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಚಂಗಚ ಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿ ರುವ ಕನಕಭವನವನ್ನು ಸೋಮವಾರ ಉದ್ಘಾಟನೆ ಮಾಡಲಾಯಿತು.
ಸಂಸದ ಆರ್. ಧ್ರುವನಾರಾಯಣ ಮಾತನಾಡಿ,‘ಪುಟ್ಟ ಗ್ರಾಮವಾಗಿರುವ ಇಲ್ಲಿ ನಿರ್ಮಿಸಿರುವ ಕನಕಭವನವನ್ನು ವಿವಿಧ ಉದ್ದೇಶ ಗಳಿಗೆ ಬಳಸಿಕೊಳ್ಳಬೇಕು.

ಮದುವೆ, ಸಭೆ ಸಮಾರಂಭಗಳಿಗೆ ಮಾತ್ರ ಸೀಮಿತವಾಗಬಾರದು. ಮಹಿಳಾ ಸಬಲೀಕರಣ, ಶೈಕ್ಷಣಿಕ ಚಟುವಟಿಕೆ ಗಳು ಹಾಗೂ ಅಭಿವೃದ್ಧಿಯ ತಾಣಗಳಾಗಬೇಕು. ಜನಾಂಗದ ಹಿರಿಯರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಕಡೆಗೆ ಹೆಚ್ಚಿನ ಒಲವು ತೋರಿಸಬೇಕು. ಮಹಿಳಾ ಸಂಘಗಳ ಸದಸ್ಯರು ತಮ್ಮ ಕುಟುಂಬದ ನಿರ್ವಹಣೆಯೊಂದಿಗೆ ಆರ್ಥಿಕ ಸದೃಢವಾಗಲು ಯತ್ನಿಸಬೇಕು ಎಂದು ಮನವಿ ಮಾಡಿದರು.

ಕೆ.ಆರ್. ನಗರ ಕಾಗಿನೆಲೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮಿಜಿ ಆಶೀರ್ವಚನ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ, ಗೊರವರ ಕುಣಿತ, ನಂದಿಕಂಬ, ಪಟಕುಣಿತ ಸೇರಿದಂತೆ ವಿವಿಧ ಕಲಾತಂಡಗಳೊಡನೆ ಕನಕದಾಸದ ಪ್ರತಿಮೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು

ಶಾಸಕ ಎಸ್‌. ಜಯಣ್ಣ. ಜಿ.ಪಂ ಸದಸ್ಯ ಜೆ. ಯೋಗೇಶ್, ಅಹಿಂದ ಜಿಲ್ಲಾಧ್ಯಕ್ಷ ದೊಡ್ಡಯ್ಯ, ಮುಖಂಡ ಕಿನಕಹಳ್ಳಿ ರಾಚಯ್ಯ, ಅಂಬಳೆ ಗ್ರಾ.ಪಂ. ಅಧ್ಯಕ್ಷ ಶಿವರಾಮು, ತಾ.ಪಂ. ಮಾಜಿ ಅಧ್ಯಕ್ಷ ಗೌರಮ್ಮ ಮಹದೇವಸ್ವಾಮಿ, ಮುಖಂಡರಾದ ಶಿವರಾಮೇಗೌಡ, ನಂಜೇಗೌಡ, ಬಿ. ಶಿವಣ್ಣ, ದೊಡ್ಡರಾಜು, ಮಹಾದೇವಸ್ವಾಮಿ, ಪುಟ್ಟಸ್ವಾಮಿ, ಶಿವಮೂರ್ತಿ, ಕಪ್ಪಣ್ಣ ಮಲ್ಲೇಗೌಡ, ಸಿದ್ದೇಶ, ಬೆಳ್ಳೇಗೌಡ, ಬೋರೇಗೌಡ, ಶಿವಣ್ಣೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT