ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚುನಾವಣೆಯಲ್ಲಿ ಗೆಲ್ಲುವ ಭರವಸೆ’

Last Updated 24 ಅಕ್ಟೋಬರ್ 2017, 5:51 IST
ಅಕ್ಷರ ಗಾತ್ರ

ಯಳಂದೂರು: ‘2018 ರಲ್ಲಿ ನಡೆಯಲಿ ರುವ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಶಾಸಕನಾಗಿ ಆಯ್ಕೆಯಾಗುತ್ತೇನೆ ಎಂಬ ವಿಶ್ವಾಸವಿದೆ’ ಎಂದು ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ಸಮೀಪದ ಬೆಲ್ಲವತ್ತ ಹಾಗೂ ಹೊಂಗನೂರು ಹಿರಿಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದರು.

‘14 ವರ್ಷಗಳ ಸೋಲು ನನ್ನನ್ನು ಇನ್ನೂ ಕಾಡಿದೆ. 60ರ ದಶಕದಲ್ಲಿ ತಮ್ಮ ತಂದೆಯ ಶ್ರಮದಿಂದ ಬೆಲ್ಲವತ್ತಾ ಹಾಗೂ ಹಿರಿಕೆರೆಗಳ ನಿರ್ಮಾಣವಾಗಿದ್ದು, 16 ಗ್ರಾಮಗಳ ಕೃಷಿ ಚಟುವಟಿಕೆಗಳಿಗೆ ನೀರುಣಿಸುತ್ತಿವೆ. ನಾನು ಶಾಸಕನಾಗಿದ್ದ ಸಮಯದಲ್ಲಿ ನೀರಾವರಿ ಮಂತ್ರಿಯಾ ಗಿದ್ದ ನಾಗೇಗೌಡರನ್ನು ಒಪ್ಪಿಸಿ ಹಿರಿಕೆರೆಯಿಂದ ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಶ್ರಮಿಸಿದ್ದೇನೆ’ ಎಂದರು.

ಕಂದಾಯ ಸಚಿವರು ಜಿಲ್ಲೆಗೆ ಬಂದಾಗ ಕಾಡಂಚಿನ ಗ್ರಾಮಗಳಾದ ಇರಸವಾಡಿ, ಸುತ್ತೂರು ಭಾಗದ ಅನೇಕ ರೈತರ ಭೂಮಿ ಅರಣ್ಯ ಪ್ರದೇಶಕ್ಕೆ ಸೇರಿದ್ದು, ಅದನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಸಾಗುವಳಿ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಬೇಕು. ಆ ಸಂದರ್ಭದಲ್ಲಿ ನಾನೂ ರೈತರೊಂದಿಗೆ ಬರುತ್ತೇನೆ ಎಂದರು.

ತಾ.ಪಂ. ಸದಸ್ಯ ಸಿ. ಮಹಾದೇವಯ್ಯ, ಜಿಪಂ. ಮಾಜಿ ಸದಸ್ಯೆ ಲಕ್ಷ್ಮಿಪುಟ್ಟಸ್ವಾಮಿ, ಗ್ರಾಪಂ. ಸದಸ್ಯ ಸಿದ್ದಬಸವಯ್ಯ, ಮಾಜಿ ಅಧ್ಯಕ್ಷ ಎಚ್.ಆರ್. ಮಹಾದೇವಸ್ವಾಮಿ ತಾ.ಪಂ. ಮಾಜಿ ಸದಸ್ಯ ಆರ್.ಮಹಾದೇವ, ನಟರಾಜು, ಮುಖಂಡರಾದ ಎನ್.ಶಿವಣ್ಣ, ವೀರಣ್ಣ, ರೇವಣ್ಣ, ಗೋವಿಂದರಾಜು, ಮರಿಸ್ವಾಮಿ, ಮಿಲ್‌ ನಾಗರಾಜು, ರಂಗಯ್ಯ, ಚಿಕ್ಕನಂಜುಯ್ಯ, ನಂಜಯ್ಯ, ರಂಗಸ್ವಾಮಿ, ಮಾದೇವ, ಶಿವನಂಜಯ್ಯ, ಜಡೇಸ್ವಾಮಿ ಹೊಂಗ ನೂರು, ಇರಸವಾಡಿ, ಮಸಣಾಪುರ ಸುತ್ತಮುತ್ತಲ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT