ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರನ್ನು ಮಾದರಿ ಕ್ಷೇತ್ರವನ್ನಾಗಿಸಲು ಮತ್ತೊಮ್ಮೆ ಚುನಾಯಿಸಲು ಮನವಿ

Last Updated 24 ಅಕ್ಟೋಬರ್ 2017, 6:11 IST
ಅಕ್ಷರ ಗಾತ್ರ

ಹಿರಿಯೂರು: ಶಿಕ್ಷಣ, ಅಭಿವೃದ್ಧಿ, ನೀರಾವರಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಿಂದಿನ 9 ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಸಾಧಿಸಲಾಗಿದ್ದು, ಬಾಕಿ ಉಳಿದಿರುವ ಅಲ್ಪಸ್ವಲ್ಪ ಕೆಲಸಗಳನ್ನು ಪೂರ್ಣಗೊಳಿಸಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸಲು ಮತ್ತೊಮ್ಮೆ ಮತ ನೀಡಿ ಆಶೀರ್ವದಿಸಬೇಕು ಎಂದು ಶಾಸಕ ಡಿ. ಸುಧಾಕರ್ ಮನವಿ ಮಾಡಿದರು.

ನಗರದ 3 ನೇ ವಾರ್ಡ್ ನ ಆಂಜನೇಯಸ್ವಾಮಿ ದೇಗುಲದ ಸಮೀಪದ ಮನೆಗಳಿಗೆ ಶನಿವಾರ ಸಂಜೆ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿದ್ದ ಅವರು ಕಾಂಗೆ್ರಸ್ ಪಕ್ಷದ ನಾಲ್ಕು ವರ್ಷದ ಸಾಧನೆಗಳ ಬಗ್ಗೆ ನಾಗರೀಕರಿಗೆ ವಿವರಿಸಿದರು.

ವಾಣಿ ವಿಲಾಸ ಜಲಾಶಯದಿಂದ ನೇರವಾಗಿ ಪೈಪ್ ಲೈನ್ ಅಳವಡಿಸುವ ಮೂಲಕ ನಗರದ ಜನತೆ ಕೊಳಕು ನೀರು ಕುಡಿಯುವುದನ್ನು ತಪ್ಪಿಸಿದ್ದೇನೆ. ಜತೆಗೆ ಅಪವ್ಯಯವಾಗುತ್ತಿದ್ದ ನೀರನ್ನು ಉಳಿಸಲಾಗಿದೆ. ನಗರದ ಬಹುತೇಕ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ ಮತ್ತು ಮೈತ್ರಿ, ಮಾತೃಪೂರ್ಣ ಯೋಜನೆ, 11.75ಲಕ್ಷ ಮನೆಗಳ ನಿರ್ಮಾಣ, ಸಂಪೂರ್ಣ ಉಚಿತ ಶಿಕ್ಷಣ, ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಧನವನ್ನು ₨ 2 ರಿಂದ ₨ 5 ರೂಗೆ ಹೆಚ್ಚಿಸಿದ್ದು, ಪ್ರತಿ ಮನೆಯಲ್ಲೂ ಸರ್ಕಾರದ ಒಂದಲ್ಲ ಒಂದು ಯೋಜನೆಯ ಲಾಭ ಪಡೆದವರು ಸಿಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ನರೇಂದ್ರ ಮೋದಿಯವರು ಚುನಾವಣೆ ಸಮಯದಲ್ಲಿ ನೀಡಿದ್ದ ಯಾವುದೇ ಭರವಸೆ ಈಡೇರಿಸದೆ ಜನರನ್ನು ವಂಚಿಸಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ವೃಥಾ ಆರೋಪ ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಮತದಾರರಾದ ತಾವು ಇಂತಹ ವಿಚಾರಗಳ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ ಆಯ್ಕೆಯ ತೀರ್ಮಾನ ಮಾಡಬೇಕು ಎಂದು ಸುಧಾಕರ್ ಮನವಿ ಮಾಡಿದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಹಟ್ಟಿ ತಿಪ್ಪೇಸ್ವಾಮಿ, ಕೆ.ಪಿ.ಸಿ.ಸಿ.ಸದಸ್ಯ ಎ.ಎಂ.ಅಮೃತೇಶ್ವರಸ್ವಾಮಿ, ನಗರಸಭಾ ಸದಸ್ಯೆ ರತ್ನಮ್ಮ ಕೃಷ್ಣಪ್ಪ, ಕೃಷ್ಣಮೂರ್ತಿ, ಗಿಡ್ಡೋಬನಹಳ್ಳಿ ಅಶೋಕ್, ಚಂದ್ರಪ್ಪ, ಕೆ. ಓಂಕಾರಪ್ಪ, ಪ್ರಸನ್ನ, ಅರುಣ್ ಕುಮಾರ್, ಪ್ರದೀಪ್, ವಿಜಯ್, ಜ್ಞಾನೇಶ್, ಶಿವಕುಮಾರ್, ರವಿ, ಗುರುಪ್ರಸಾದ್, ಮುಬಾರಕ್, ವೈ.ಕೃಷ್ಣ, ಸುರೇಶ್ ಬಾಬು, ಕಲ್ಲಹಟ್ಟಿ ಹರೀಶ್, ಗಿರೀಶ್, ನರೇಂದ್ರ, ವೀರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT