ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ ಬೆಲೆ ದಿಢೀರ್‌ ಏರಿಕೆ

Last Updated 24 ಅಕ್ಟೋಬರ್ 2017, 6:46 IST
ಅಕ್ಷರ ಗಾತ್ರ

ಹಾಸನ: ದಾಳಿಂಬೆ ಹಣ್ಣಿನ ಬೆಲೆ ದಿಢೀರ್ ಏರಿಕೆಯಾಗಿದೆ. ಕಳೆದ ವಾರ ಕೆ.ಜಿ ದಾಳಿಂಬೆ ₹ 80 ಇತ್ತು. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಹಣ್ಣು ಬರುತ್ತಿರುವ ಕಾರಣ ಪ್ರಸ್ತುತ ಕೆ.ಜಿ ₹ 100 ರಂತೆ ಮಾರುತ್ತಿದ್ದು, ₹ 20 ಏರಿಕೆಯಾಗಿದೆ.

‘ಜಿಲ್ಲೆಗೆ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ದಾಳಿಂಬೆ ಹಣ್ಣು ಬರುತ್ತದೆ. ಮಳೆ ಕೊರತೆ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾದ ಕಾರಣ ದಾಳಿಂಬೆ ಹಣ್ಣಿನ ಬೆಲೆ ಹೆಚ್ಚಳವಾಗಿದೆ’ ಎಂದು ವ್ಯಾಪಾರಿ ಚಂದ್ರಶೇಖರ್‌ ತಿಳಿಸಿದರು.

ಉಳಿದಂತೆ ಕೆ.ಜಿ ಗೆ ಸೇಬು ₹ 100, ಬಾಳೆಹಣ್ಣು ₹ 80, ಕಿತ್ತಳೆ ಹಣ್ಣು ₹ 80, ದ್ರಾಕ್ಷಿ ₹ 200, ಪಪ್ಪಾಯ ₹ 30, ಸಪೋಟ ಕೆ.ಜಿ.ಗೆ 120ರಂತೆ ಮಾರಾಟವಾಗುತ್ತಿದೆ. ಬಾಳೆಹಣ್ಣು ಕೆ.ಜಿ ಗೆ ₹ 20 ಇಳಿಕೆ ಆಗಿರುವುದು ಬಿಟ್ಟರೆ ಇತರೆ ಹಣ್ಣಿನ ದರದಲ್ಲಿ ವ್ಯತ್ಯಾಸವಾಗಿಲ್ಲ.

ಇನ್ನು ನುಗ್ಗೇಕಾಯಿ ದರ ಗಗನಕ್ಕೇರಿದ್ದು, ಬೆಲೆ ಕೇಳಿದರೆ ಗ್ರಾಹಕರು ಬೆಚ್ಚಿ ಬೀಳುವಂತಾಗಿದೆ. ಕೆ.ಜಿ ಗೆ ₹ 200 ರಂತೆ ಮಾರಾಟವಾಗುತ್ತಿದೆ. ಕೆಲ ದಿನಗಳಿಂದ ದರ ಇಳಿಕೆಯಾಗಿಲ್ಲ.

‘ನುಗ್ಗೇಕಾಯಿ ಹೆಚ್ಚು ಮಾರುಕಟ್ಟೆಗೆ ಬಾರದ ಕಾರಣ ಬೆಲೆ ಏರಿಕೆಯಾಗಿದೆ. ದರ ಕೇಳಿ ಗ್ರಾಹಕರು ಸುಮ್ಮನಾಗುತ್ತಾರೆ’ ಎಂದು ವ್ಯಾಪಾರಿ ಪ್ರತಾಪ್‌ ತಿಳಿಸಿದರು.
ಬೀನ್ಸ್‌ ಕೆ.ಜಿಗೆ ₹ 50, ಆಲೂಗೆಡ್ಡೆ ₹ 20 ಹಾಗೂ ಟೊಮೆಟೊ ಕೆ.ಜಿಗೆ ₹ 30, ಕ್ಯಾರೆಟ್ ₹ 50, ಹಾಗಲಕಾಯಿ ₹ 40, ದಪ್ಪ ಮೆಣಸಿನಕಾಯಿ ₹ 80, ಈರುಳ್ಳಿ ₹ 30 ರಂತೆ ಮಾರಾಟವಾಗುತ್ತಿದೆ. ಕೊತ್ತಂಬರಿ ₹ 10, ಪಾಲಾಕ್, ಲಾಳಿ ಮತ್ತು ದಂಟು ಸೊಪ್ಪು ಕಂತೆಗೆ ₹ 5 ರಿಂದ ₹ 6 ರಂತೆ ಲಭ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT