ರಾಹುಲ್ ಗಾಂಧಿಯನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರಾ ಹಾರ್ದಿಕ್, ಕಾಂಗ್ರೆಸ್ ಜತೆ ಕೈಜೋಡಿಸ್ತಾರಾ?

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಅನುಮಾನಕ್ಕೆ ಇಂಬು ನೀಡಿದ ಸಿಸಿಟಿವಿ ದೃಶ್ಯಾವಳಿ

ರಾಹುಲ್ ಗಾಂಧಿಯನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರಾ ಹಾರ್ದಿಕ್, ಕಾಂಗ್ರೆಸ್ ಜತೆ ಕೈಜೋಡಿಸ್ತಾರಾ?

Published:
Updated:
ರಾಹುಲ್ ಗಾಂಧಿಯನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರಾ ಹಾರ್ದಿಕ್, ಕಾಂಗ್ರೆಸ್ ಜತೆ ಕೈಜೋಡಿಸ್ತಾರಾ?

ಗಾಂಧಿನಗರ: ಪಾಟಿದಾರ ಅನಾಮತ್‌ ಆಂದೋಲನ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ಅವರು ಅಹಮದಾಬಾದಿನ ಖಾಸಗಿ ಹೋಟೆಲ್‌ವೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಸಂಶಯಗಳು ಹುಟ್ಟಿಕೊಂಡಿರುವಾಗಲೇ, ಇದಕ್ಕೆ ಇಂಬು ನೀಡುವಂತೆ ಹಾರ್ದಿಕ್ ಅವರು ಹೋಟೆಲ್‌ವೊಂದರ ಒಳಗೆ ಹೋಗುತ್ತಿರುವ ಹಾಗೂ ಹೊರಬರುತ್ತಿರುವ ದೃಶ್ಯಾವಳಿಗಳು ಮಾಧ್ಯಮಗಳಿಗೆ ಲಭ್ಯವಾಗಿವೆ.

ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆದಿದ್ದು, ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಜತೆ ಕೈಜೋಡಿಸುತ್ತಾರಾ? ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ವ್ಯಕ್ತವಾಗಿವೆ.

ಲಭ್ಯವಿರುವ ದೃಶ್ಯಾವಳಿಯಲ್ಲಿ ಹಾರ್ದಿಕ್ ಅವರು ಭಾನುವಾರ ರಾತ್ರಿ ಸುಮಾರು 11.53ಕ್ಕೆ ಮೂವರ ಜತೆಯಲ್ಲಿ ಹೋಟೆಲ್‌ ಒಳಗೆ ಹೋಗಿರುವುದು ಹಾಗೂ 12.22ಕ್ಕೆ ಹೊರಬಂದಿರುವುದು ದಾಖಲಾಗಿದೆ.

ಕ್ಷತ್ರಿಯ ಠಾಕೂರ್ ಸೇನಾ ಸಂಚಾಲಕ ಅಲ್ಪೇಶ್ ಠಾಕೂರ್ ಅವರು ಕಾಂಗ್ರೆಸ್‌ಗೆ ಸೇರಿದ ಬೆನ್ನಲ್ಲೇ ಈ ಎಲ್ಲಾ ಬೆಳವಣಿಗೆಗಳು ನಡೆದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಸಿಸಿಟಿವಿ ದೃಶ್ಯಾವಳಿಗಳ ಸಾಕ್ಷಿಯನ್ನು ತಳ್ಳಿಹಾಕಿದ ಹಾರ್ದಿಕ್ ಪಟೇಲ್ ಅವರು, ‘ನಾನು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಲ್ಲ. ಆದರೆ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದೇನೆ. ಸೋಲಂಕಿ ಅವರ ಜತೆ ಪಾಟೀದರ್ ಸಮುದಾಯದ ಕೆಲವು ವಿಚಾರಗಳ ಬಗ್ಗೆ ಮಾತನಾಡಿದ್ದೇನೆ’ ಎಂದು ಹೇಳಿದ್ದಾರೆ.

ಸೋಲಂಕಿ ಕೂಡ ಹಾರ್ದಿಕ್ ಅವರು ‘ರಾಹುಲ್ ಅವರನ್ನು ಭೇಟಿ ಮಾಡಿಲ್ಲ. ನನ್ನ ಮತ್ತು ಗೆಹ್ಲೋಟ್ ಅವರನ್ನು ಮಾತ್ರ ಭೇಟಿ ಮಾಡಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry