ರಸ್ತೆ ಮೇಲೆ ನೀರು:ಸಂಚಾರಕ್ಕೆ ವ್ಯತ್ಯಯ

ಗುರುವಾರ , ಜೂನ್ 27, 2019
23 °C

ರಸ್ತೆ ಮೇಲೆ ನೀರು:ಸಂಚಾರಕ್ಕೆ ವ್ಯತ್ಯಯ

Published:
Updated:

ಹಿರೇಕೆರೂರ: ತಾಲ್ಲೂಕಿನ ಬಸರೀಹಳ್ಳಿ ಗ್ರಾಮದ ನಾಗರಕಟ್ಟೆ ಕೆರೆ ಭರ್ತಿ ತುಂಬಿದ್ದು, ಕೆರೆಯ ನೀರು ರಸ್ತೆಯ ಮೇಲೆ ನಿಂತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಭಾರಿ ಮಳೆಯಿಂದ ಕೆರೆ ತುಂಬಿರುವ ಪರಿಣಾಮ ಕೆರೆಯ ಹಿನ್ನೀರು ಲೋಕೋಪಯೋಗಿ ಇಲಾಖೆಗೆ ಸೇರಿರುವ ರಸ್ತೆ ಮೇಲೆ ನಿಂತಿರುವುದರಿಂದ ಈ ರಸ್ತೆಯ ಮೂಲಕ ಪಟ್ಟಣದಿಂದ ಕಳಗೊಂಡ, ನೂಲಗೇರಿ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಇದರಿಂದ ಬಸ್ಸುಗಳು, ವಾಹನ ಸವಾರರು ಸುತ್ತುಹಾಕಿ ಹೋಗಬೇಕಾದ ಸ್ಥಿತಿ ಎದುರಾಗಿದೆ.

‘ಮಳೆ ಹೆಚ್ಚಾದಾಗ ಇಲ್ಲಿ ಸಂಚಾರಕ್ಕೆ ಪದೇಪದೇ ತೊಂದರೆಯಾಗುತ್ತಿದೆ. ಸಮರ್ಪಕ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲು ಇಲ್ಲಿ ಸೇತುವೆಯನ್ನು ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಕಳಗೊಂಡ ಗ್ರಾಮಸ್ಥರಾದ ಹೂವನಗೌಡ ಮಳವಳ್ಳಿ, ಭರಮಗೌಡ ದಂಡಿಗಿಹಳ್ಳಿ, ಉಮೇಶ ಮುದಿಗೌಡ್ರ ಆಗ್ರಹಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry