ಹೂತ ಶವ ಹೊರ ತೆಗೆದು ಚಿನ್ನಾಭರಣ ಕಳವು

ಬುಧವಾರ, ಜೂನ್ 19, 2019
31 °C

ಹೂತ ಶವ ಹೊರ ತೆಗೆದು ಚಿನ್ನಾಭರಣ ಕಳವು

Published:
Updated:
ಹೂತ ಶವ ಹೊರ ತೆಗೆದು ಚಿನ್ನಾಭರಣ ಕಳವು

ಕಲಬುರ್ಗಿ: ಜಿಲ್ಲೆಯ ಆಳಂದ ತಾಲ್ಲೂಕು ಖಜೂರಿ ಗ್ರಾಮದಲ್ಲಿ ಹೂತ ಶವ ಹೊರ ತೆಗೆದು ಚಿನ್ನಾಭರಣ ಕಳವು ಮಾಡಲಾಗಿದೆ.

ಪ್ರೇಮಾಬಾಯಿ ಡಗೆ (೭೫) ಐದು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಕ್ಕಳಿರದ ಹಿನ್ನಲೆಯಲ್ಲಿ ಗ್ರಾಮಸ್ಥರು ಇವರ ಮೈಮೇಲಿನ ಚಿನ್ನದ ಒಡವೆ ಸಮೇತ ಅಂತ್ಯಕ್ರಿಯೆ ನೆರವೇರಿಸಿದ್ದರು.

ವಿಷಯ ತಿಳಿದ ಪರಿಚಿತ ವ್ಯಕ್ತಿಗಳೇ ಚಿನ್ನಾಭರಣ ಕಳವು ಮಾಡಿರಬಹುದು ಎಂದು ಶಂಕಿಸಲಾಗಿದೆ. ಸೋಮವಾರ ರಾತ್ರಿ ಸಮಾಧಿಯಿಂದ ಶವ ಹೊರತೆಗದು ಶವದ ಮೈಮೇಲಿನ ೫೦ ಗ್ರಾಂಗೂ ಅಧಿಕ ಚಿನ್ನಾಭರಣ ದೋಚಲಾಗಿದೆ.

ಬೆಳಿಗ್ಗೆ ಸಮಾಧಿ ಮೇಲ್ಗಡೆ ಬಿದ್ದಿರುವ ಶವ ಕಂಡು ಕುಟುಂಬಸ್ಥರು ಕಂಗಾಲಾದರು. ಸ್ಥಳದಲ್ಲೇ ಭೇಟಿ ನೀಡಿದ ಆಳಂದ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry