ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರು– ಕಾರವಾರ ರೈಲು ಒಂದೇ ಮಾರ್ಗದಲ್ಲಿ ಸಂಚರಿಸಲಿ’

Last Updated 24 ಅಕ್ಟೋಬರ್ 2017, 9:32 IST
ಅಕ್ಷರ ಗಾತ್ರ

ಉಡುಪಿ: ಪ್ರಯಾಣಿಕರ ಹಿತದೃಷ್ಟಿ ಯಿಂದ ಬೆಂಗಳೂರು– ಮಂಗಳೂರು– ಕಾರವಾರ ರೈಲು ಮೈಸೂರಿನಿಂದ ಹೊರಡಲಿ, ರಾತ್ರಿ 8.30ಕ್ಕೆ ಬೆಂಗಳೂರು ನಿಲ್ದಾಣದಿಂದ ನಿರ್ಗಮಿಸಲಿ ಎಂದು ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್ ಮನವಿ ಮಾಡಿದ್ದಾರೆ.

ಈ ರೈಲು ಸಂಚಾರ ಆರಂಭಿಸಿ 10 ವರ್ಷಗಳಾಗಿವೆ. ಕರಾವಳಿ ಜನರು ಮಾತ್ರವಲ್ಲ, ಮೈಸೂರು, ಮಂಡ್ಯ, ರಾಮನಗರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕರಾವಳಿಯ ಜನ ರಿಗೆ ಊರಿಗೆ ಬಂದು ಹೋಗಲು ಇರುವ ಏಕೈಕ ರೈಲು ಇದಾಗಿದೆ.

ಬೆಂಗಳೂರು– ಮೈಸೂರು– ಹಾಸನದ ವರೆಗಿನ ದೂರವು 258 ಕಿ.ಮೀ ಆಗಿದ್ದು, ಬೆಂಗಳೂರು– ಹಾಸನದ ಪ್ರಯಾಣದ ಅವಧಿ 5 ಗಂಟೆ. ಯಶವಂತಪುರ ನೆಲಮಂಗಲ ಮದ್ಯೆ 9 ಕಿ.ಮೀ ರೈಲ್ವೆ ಮಾರ್ಗವು ಕೆಲವು ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದು ಅದ ರಲ್ಲಿ ಬೆಂಗಳೂರು ನೆಲಮಂಗಲ ಪ್ಯಾಸೆಂ ಜರ್ ರೈಲು ಓಡುತ್ತಿದೆ. ನೆಲಮಂಗಲ– ಹಾಸನ ಮಾರ್ಗವೂ 2017 ಜನವರಿಯಿಂದ ಆರಂಭವಾದ ಪರಿಣಾಮ ಬೆಂಗಳೂರು– ಹಾಸನದವರೆಗಿನ ದೂರವು 107 ಕಿ.ಮೀ ಆಗಿದೆ.

ಅಂದರೆ ಈ ದೂರವು ಸುಮಾರು 151 ಕಿ.ಮೀ ಕಡಿಮೆಯಾಗಿ 3 ಗಂಟೆಗಳ ಪ್ರಯಾಣದ ಅವಧಿ ಇಳಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಆದ್ದರಿಂದ ಮೈಸೂರು, ರಾಮನಗರ ಮತ್ತು ಮಂಡ್ಯದ ಜನತೆಗೆ ತೊಂದರೆಯಾಗದಂತೆ ರೈಲು ಸಮೀಪದ ಮಾರ್ಗದಲ್ಲಿ ಸಂಚರಿಸಬೇಕು.

ಅದಕ್ಕಾಗಿ ಸಂಘ ಪರ್ಯಾಯ ವ್ಯವಸ್ಥೆಯ ಪ್ರಸ್ತಾವನೆ ತಯಾರಿಸಿದೆ. ಅದರ ಪ್ರಕಾರ ಪ್ರಸ್ತಾವಿತ ರೈಲು ಮೈಸೂರಿನಿಂದ ಪ್ರಾರಂಭವಾಗಿ ಬೆಂಗ ಳೂರಿಗೆ ಬಂದು ಅಲ್ಲಿಂದ ಹೊಸ ಮಾರ್ಗದಲ್ಲಿ ಸಂಚರಿಸಬೇಕು. ಅದರ ವೇಳಾಪಟ್ಟಿಯನ್ನು ತಯಾರಿಸಿ ನೈಋತ್ಯ ರೈಲ್ವೆಗೆ ಈಗಾಗಲೇ ಕಳುಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT