ಇಂದಿನ ಕೌಶಲ ನಾಳಿನ ತಂತ್ರಜ್ಞಾನ

ಸೋಮವಾರ, ಜೂನ್ 24, 2019
30 °C

ಇಂದಿನ ಕೌಶಲ ನಾಳಿನ ತಂತ್ರಜ್ಞಾನ

Published:
Updated:

ಮಾಹಿತಿ ದಾಹದ ಇಂದಿನ ಜಗತ್ತಿನಲ್ಲಿ ಅಂತರ್ಜಾಲದ ಬಹುತೇಕ ಪುಟಗಳಲ್ಲಿ ಹೆಚ್ಚು ಹೆಚ್ಚು ತಂತ್ರಜ್ಞಾನದ ವಿಷಯಗಳನ್ನು ನೀಡಲು ಪ್ರಯತ್ನಿಸುತ್ತಲೇ ಇವೆ. ಬಹುತೇಕ ಬ್ಲಾಗ್‌ಗಳಲ್ಲಿ ಈಗ ತಂತ್ರಜ್ಞಾನದ ವಿಷಯಗಳೇ ಹೆಚ್ಚಾಗಿ ಪ್ರಕಟವಾಗುತ್ತವೆ.

ನಾಳಿನ ತಂತ್ರಜ್ಞಾನ ಯಾವುದು ಎಂಬ ಬಗ್ಗೆ ಇಂತಹ ವೆಬ್‌ ಪೇಜ್‌ಗಳಲ್ಲಿ ಕುತೂಹಲದ ಬರಹಗಳನ್ನು ಕಾಣಬಹುದು. ನಾಳಿನ ಆವಿಷ್ಕಾರಕ್ಕೆ ಇಂದಿನ ಕೌಶಲವೇ ಮೂಲ ಎಂಬಂತಿರುತ್ತವೆ ಇಂದಿನ ತಂತ್ರಜ್ಞಾನ ಸಂಬಂಧಿ ಬರಹಗಳು. ತಂತ್ರಜ್ಞಾನದ ನಾಗಾಲೋಟದ ಇಂದಿನ ದಿನಗಳಲ್ಲಿ ನಾಳಿನ ಬಗ್ಗೆ ಇಂತಹ ಕುತೂಹಲವೂ ಸಹಜ.

ತಂತ್ರಜ್ಞಾನ ಜಗತ್ತಿನ ಯಾವುದೇ ಬೆಳವಣಿಗೆಗಳನ್ನು ಪ್ರಕಟಿಸುವ ಹಾಗೂ ಹೊಸ ಹೊಸ ಗ್ಯಾಜೆಟ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ವಿವರಿಸುವ ಬರಹಗಳು ವೆಬ್‌ ಪೇಜ್‌ಗಳಲ್ಲಿ ಹೆಚ್ಚಾಗಿವೆ. ಟೆಕ್‌ರೆವೆಲ್‌ (Techrevel) ರೀತಿಯ ವೆಬ್‌ಸೈಟ್‌ಗಳ ಮೂಲಕ ಬರುವ ಗ್ಯಾಜೆಟ್‌ ವಿಮರ್ಶೆ ಹಾಗೂ ತಂತ್ರಜ್ಞಾನ ಸಂಬಂಧಿ ಬರಹಗಳನ್ನು ಜನ ಹೆಚ್ಚು ಕುತೂಹಲದಿಂದ ಓದುತ್ತಾರೆ. ಇಂತಹ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗುವ ಬರಹಗಳ ಬಗ್ಗೆ ‘ಶಂಖದಿಂದ ಬಂದರೆ ತೀರ್ಥ’ ಎಂಬಂಥ ನಂಬಿಕೆ ಇರುತ್ತದೆ. ಹೀಗಾಗಿ ಜನ ತಂತ್ರಜ್ಞಾನ ವಿಷಯಗಳಲ್ಲಿ ಇಂತಹ ವೆಬ್‌ಸೈಟ್‌ಗಳ ಬರಹಗಳನ್ನು ಹೆಚ್ಚು ಓದುತ್ತಾರೆ ಮತ್ತು ನಂಬುತ್ತಾರೆ.

ತಂತ್ರಜ್ಞಾನದ ವಿಷಯಗಳನ್ನು ಬರೆಯುವ ಬಹುತೇಕ ಬರಹಗಾರರು ತಾಂತ್ರಿಕ ಪರಿಭಾಷೆಯ ಜತೆಗೆ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡಿರುತ್ತಾರೆ. ಹೀಗಾಗಿ ಅಂತಹ ಬರಹಗಾರರ ಗ್ಯಾಜೆಟ್‌ ವಿಮರ್ಶೆ, ತಾಂತ್ರಿಕ ವಿಶ್ಲೇಷಣೆಗಳನ್ನು ಹೆಚ್ಚು ಮಂದಿ ಓದುತ್ತಾರೆ. ಟೆಕ್‌ರೆವೆಲ್‌ನಂತಹ ವೆಬ್‌ಸೈಟ್‌ಗಳಲ್ಲಿ ಲೇಖನಗಳನ್ನು ಪ್ರಕಟಿಸುವುದು ಕೂಡಾ ಕೆಲವು ಬರಹಗಾರರಿಗೆ ಹೆಮ್ಮೆಯ ವಿಷಯ. ತಂತ್ರಜ್ಞಾನದ ವಿಷಯಗಳನ್ನು ಹೀಗೆ ಹಂಚುವುದರಲ್ಲಿಯೇ ಹಲವರಿಗೆ ಹೆಚ್ಚು ಆಸಕ್ತಿ.

ತಂತ್ರಜ್ಞಾನದ ವಿಷಯಗಳ ಬಗ್ಗೆ ಬರೆಯುವುದು, ಗ್ಯಾಜೆಟ್‌ ವಿಮರ್ಶೆ ಮಾಡುವುದು ಕೂಡಾ ಒಂದು ಕಲೆ. ಗ್ಯಾಜೆಟ್‌ ವಿಮರ್ಶೆಯ ಹೆಸರಿನಲ್ಲಿ ಗ್ಯಾಜೆಟ್‌ ಬಳಕೆಯ ಸ್ವಂತ ಅನುಭವವನ್ನು ದಾಖಲಿಸುವವರೇ ಹೆಚ್ಚು. ಆದರೆ, ಟೆಕ್‌ರೆವೆಲ್‌ ಇಂತಹ ಬರಹಗಳ ಪ್ರಕಟಣೆಯ ಬಗ್ಗೆ ಸಾಕಷ್ಟು ಮಾನದಂಡಗಳನ್ನು ಇಟ್ಟುಕೊಂಡಿದೆ. ತಂತ್ರಜ್ಞಾನದ ವಿಷಯಗಳಲ್ಲಿ ಬಹುಸಂಖ್ಯಾತರನ್ನು ತಲುಪುವ, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಆಕರ್ಷಕವಾಗಿ ಬರೆಯುವವರಿಗೆ ಮಾತ್ರ ಇಲ್ಲಿ ಜಾಗವಿದೆ.

ಇಂದಿನ ತಂತ್ರಜ್ಞಾನ ನಾಳೆಗೆ ಹಳತು ಎಂಬಂತಿರುವ ಕಾಲದಲ್ಲಿ, ಇಂದಿನ ಕೌಶಲ ನಾಳಿನ ತಂತ್ರಜ್ಞಾನವಾಗಬಲ್ಲದು. ಅದಕ್ಕಾಗಿ ತಂತ್ರಜ್ಞಾನ ವಿಷಯಗಳಲ್ಲಿ ಮಾಹಿತಿ ಹೆಕ್ಕುವ ಮತ್ತು ಅದರ ಬಗ್ಗೆ ಬರೆಯುವ, ಬರೆದಿದ್ದನ್ನು ಪ್ರಕಟಿಸುವ ಅಭ್ಯಾಸವೂ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನದ ವಿಷಯಗಳನ್ನು ಪ್ರಕಟಿಸುವ ವೆಬ್‌ಸೈಟ್‌, ಬ್ಲಾಗ್‌ಗಳ ಪಾತ್ರವೂ ಮುಖ್ಯವಾಗಿದೆ ಎಂದು ಪರಿಣತರು ಹೇಳುತ್ತಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry